ಗ್ರಾಪಂ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ರ್ನಿಣಯ ರದ್ದು

Untitled-1
ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಪಂ ಅಧ್ಯಕ್ಷರ ವಿರುದ್ಧ ತಂದಿದ್ದ ಅವಿಶ್ವಾಸ ರ್ನಿಣಯಕ್ಕೆ ಬೆಂಬಲ ಸಿಗದೇ ಅಧ್ಯಕ್ಷರಾಗಿ ಮರು ಆಯ್ಕೆಯಾದ ಸಂತೋಷ್​ನಾಯಕ್​ ಅವರನ್ನು ಬೆಂಬಲಿಗರು ಸನ್ಮಾನಿಸಿದರು. ಗ್ರಾಮಪಂಚಾಯಿತಿ ಸದಸ್ಯ ಸಂದೀಪ್​, ರವಿಕುಮಾರ್​, ಮಹದೇವಮ್ಮ ಕೃಷ್ಣಪ್ಪ, ಗೌರಮ್ಮ, ರೂಪಾ ನಾರಾಯಣ್​, ಲ್ಮದೇವಮ್ಮ ಇತರರು ಇದ್ದರು.
Published on

ನೆಲಮಂಗಲ : ಸೋಲದೇವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ತಂದಿದ್ದ ಅವಿಶ್ವಾಸ ರ್ನಿಣಯಕ್ಕೆ ಬೆಂಬಲ ಸಿಗದೆ ಅಧ್ಯಕ್ಷರಾಗಿ ಸಂತೋಷ್​ ನಾಯಕ್​ ಮರು ಆಯ್ಕೆಯಾಗಿದ್ದಾರೆ. ಅವಿಶ್ವಾಸ ರ್ನಿಣಯ ಸಭೆ ಶುಕ್ರವಾರ ನಿಗದಿಯಾಗಿತ್ತು. ಅಧ್ಯಕ್ಷ ಸಂತೋಷ ನಾಯಕ್​ ವಿರುದ್ಧ ಅವಿಶ್ವಾಸ ರ್ನಿಣಯಕ್ಕೆ ಸಹಿಹಾಕಿದ್ದ 11 ಸದಸ್ಯರ ಪೈಕಿ 3 ಮಂದಿ ಗೈರಾಗಿದ್ದು, ಕೋರಂ ಕೊರತೆ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಾಶ್ರೀ ಸಭೆ ನಡೆಸಿ ಅವಿಶ್ವಾಸ ರ್ನಿಣಯದ ಸಭೆ ಮುಕ್ತಾಯಗೊಳಿಸಿದರು.

ಗ್ರಾಪಂನಲ್ಲಿ ಒಟ್ಟು 16 ಸದಸ್ಯರಿದ್ದು, ಕೆಲ ಸದಸ್ಯರು ಅಧ್ಯಕ್ಷರ ಆಡಳಿತ ವಿರುದ್ಧ ಬೇಸತ್ತು ಮೇ 12ರಂದು ಅವಿಶ್ವಾಸ ರ್ನಿಣಯ ಮಂಡನೆಗೆ ತೀರ್ಮಾನಿಸಿದ್ದರು. 11 ಸದಸ್ಯರು ಸಹಿ ಹಾಕಿ ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಿದ್ದರು. ಅಧ್ಯಕ್ಷರ ಆಯ್ಕೆ ಚುನಾವಣೆಗೆ ಗಡುವು ವಿಧಿಸಿದ್ದ ಉಪವಿಭಾಗಾಧಿಕಾರಿ ದುರ್ಗಾಶ್ರೀ ಶುಕ್ರವಾರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಚುನಾವಣೆ ನಡೆಸಿದರು. ಅವಿಶ್ವಾಸ ರ್ನಿಣಯಕ್ಕೆ ಸಹಿ ಹಾಕಿದ್ದ 11 ಸದಸ್ಯರ ಪೈಕಿ ಮೂವರು ಗೈರಾದ ಹಿನ್ನೆಲೆಯಲ್ಲಿ ಸದಸ್ಯರು ಮಂಡಿಸಿದ್ದ ಅವಿಶ್ವಾಸ ರ್ನಿಣಯ ರದ್ದಾಗಿ ಮತ್ತೆ ಅಧ್ಯಕ್ಷರಾಗಿ ಸಂತೋಷ್​ನಾಯಕ್​ ಆಯ್ಕೆಯಾಗಿದ್ದರು.

ಅವಿಶ್ವಾಸ ರ್ನಿಣಯ ಮಂಡನೆ ಹಿನ್ನೆಲೆಯಲ್ಲಿ ಕಚೇರಿ ಮುಂದೆ ನೂರಾರು ಜನ ಜಮಾಯಿಸಿದ್ದರು. ಬಿಗುವಿನ ವಾತಾವರಣ ಏರ್ಪಟ್ಟಿದ್ದರಿಂದ ಪೊಲೀಸ್​ ಬಂದೋಬಸ್ತ್​ ಮಾಡಲಾಗಿತ್ತು. ಗ್ರಾಪಂ ಅಧ್ಯಕ್ಷ ಸಂತೋಷ್​ನಾಯಕ್​ ಮಾತನಾಡಿ, ಕೆಲ ಸದಸ್ಯರು, ಮುಖಂಡರ ಒತ್ತಡಕ್ಕೆ ಸಿಲುಕಿ ಅವಿಶ್ವಾಸ ರ್ನಿಣಯಕ್ಕೆ ಸಹಿ ಹಾಕಿದ್ದರು. ನನ್ನ ಮೇಲಿನ ವಿಶ್ವಾಸ ಹಾಗೂ ಅಭಿವೃದ್ಧಿ ದೃಷ್ಟಿಕೋನದಿಂದ ಅವಿಶ್ವಾಸ ರ್ನಿಣಯ ಸಭೆಯಲ್ಲಿ ಅವರಿಗೆ ಉತ್ತರ ದೊರಕಿದೆ. ಪಾತೀತವಾಗಿ ಎಲ್ಲ ಸದಸ್ಯರನ್ನು ಒಗ್ಗೂಡಿಸಿಕೊಂಡು ಮುಂದೆ ಅಭಿವೃದ್ಧಿ ಕಾರ್ಯದಲ್ಲಿ ಇನ್ನೂ ಹೆಚ್ಚು ತೊಡಗಿಸಿಕೊಳ್ಳುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net