ಗ್ರಾಪಂ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಅಂಗೀಕೃತ

3 bir 1
Published on

ಬೀರೂರು: ಜೋಡಿತಿಮ್ಮಾಪುರ ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆಗೆ ಗ್ರಾಪಂನ ಹೆಚ್ಚಿನ ಸದಸ್ಯರು ಅವಿಶ್ವಾಸ ಮಂಡನೆ ಪರವಾಗಿ ಮತ ಚಲಾವಣೆ ಮಾಡಿದ್ದರಿಂದ ಗ್ರಾಪಂ ಅಧ್ಯಕ್ಷರ ವಿರುದ್ದದ ಅವಿಶ್ವಾಸ ಅಂಗೀಕಾರವಾಗಿದೆ.

ಗ್ರಾಪಂ ಸಭಾ ಭವನದಲ್ಲಿ ತರೀಕೆರೆ ಉಪವಿಭಾಗಾಕಾರಿ ಕಾಂತರಾಜ್ ಅಧ್ಯಕ್ಷತೆಯಲ್ಲಿ ನಡೆದ ಅವಿಶ್ವಾಸ ಮಂಡನೆಯ ಸಭೆಯಲ್ಲಿ ಮೊದಲಿಗೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆಯ ಸಭೆಯಲ್ಲಿ ಎಲ್ಲ ಒಂಭತ್ತು ಸದಸ್ಯರು ಹಾಜರಿದ್ದರು. ಅವಿಶ್ವಾಸದ ಪರವಾಗಿ ಆರು ಸದಸ್ಯರು ಮತ್ತು ಅವಿಶ್ವಾಸದ ವಿರುದ್ಧವಾಗಿ ಮೂವರು ಸದಸ್ಯರು ಮತ ಚಲಾಯಿಸಿದರು.

ಅವಿಶ್ವಾಸ ಸೂಚನೆಗೆ ಅವಶ್ಯಕ್ಕಿಂತ ಹೆಚ್ಚಿನ ಸದಸ್ಯರು ಅವಿಶ್ವಾಸ ಮಂಡನೆ ಪರವಾಗಿ ಮತಚಲಾವಣೆ ಮಾಡಿದ್ದಾರೆ. ಆದ್ದರಿಂದ ಜೋಡಿತಿಮ್ಮಾಪುರ ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಸೂಚನೆ ಅಂಗೀಕೃತವಾಗಿದ್ದು, ಗ್ರಾಪಂ ಅಧ್ಯಕ್ಷ ಶಾಂತಮ್ಮ ತಕ್ಷಣ ಜೋಡಿತಿಮ್ಮಾಪುರ ಗ್ರಾಪಂ ಅಧ್ಯಕ್ಷ ಸ್ಥಾನದಿಂದ ಪದಚ್ಯುತರಾಗಿದ್ದಾರೆ. ಅಲ್ಲದೇ ಗ್ರಾಪಂನ ಎಲ್ಲ ದಸ್ತಾವೇಜು ಮತ್ತು ಹಣ ಅಥವಾ ಇತರ ವಸ್ತುಗಳನ್ನು ಕೂಡಲೇ ಪಿಡಿಒಗೆ ಒಪ್ಪಿಸಬೇಕು ಎಂದು ತಿಳಿಸಲಾಯಿತು. ಮುಂದಿನ ಚುನಾವಣೆಯ ದಿನಾಂಕವನ್ನು ಸಮಾಜ ಕಲ್ಯಾಣಾಧಿಕಾರಿ ಪ್ರಕಟಿಸಲಿದ್ದಾರೆ ಎಂದು ಎಸಿ ಕಾಂತರಾಜ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net