ಅಬ್ಬೇನಹಳ್ಳಿ ಗ್ರಾಪಂ ಅಧ್ಯೆ&ಉಪಾಧ್ಯಕ್ಷ ವಿರುದ್ಧ ಅವಿಶ್ವಾಸ

madivala
Published on

ಮಡಿವಾಳ: ಉಪ ವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದಲ್ಲಿ ಬುಧವಾರ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯೆ ಜಮುನಾಬಾಯಿ ಹಾಗೂ ಉಪಾಧ್ಯಕ್ಷ ಜೈರಾಮ್​ ಅವರ ವಿರುದ್ಧ ಸದಸ್ಯರು ಅವಿಶ್ವಾಸ ಮಂಡಿಸಿದರು.

ಎರಡನೇ ಬಾರಿಗೆ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಲು ಜಿಲ್ಲಾ ಉಪವಿಭಾಗಾಧಿಕಾರಿಗಳಿಗೆ 12 ಮಂದಿ ಸದಸ್ಯರು ಸಹಿ ಮಾಡಿ ಮನವಿ ಸಲ್ಲಿಸಿದ್ದರು. ಅದರಂತೆ ಜಿಲ್ಲಾ ಉಪವಿಭಾಗಾಧಿಕಾರಿ ಡಾ. ಮೈತ್ರಿ ಅವರು ಗ್ರಾಪಂನಲ್ಲಿ ಅವಿಶ್ವಾಸ ಸಭೆ ಕರೆದಿದ್ದರು. ಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರು ಸೇರಿ 17 ಮಂದಿ ಸದಸ್ಯರು ಹಾಜರಿದ್ದರು. ಅವಿಶ್ವಾಸದ ಪರವಾಗಿ 13 ಮತ, ಅವಿಶ್ವಾಸ ವಿರುದ್ಧ 4 ಮತ ಚಲಾವಣೆ ಮಾಡಿದ ಕಾರಣ ಅಧ್ಯೆ&ಉಪಾಧ್ಯಕ್ಷರನ್ನು ಸದಸ್ಯರ ಕೋರಂ ಇಲ್ಲದ ಕಾರಣ ಪದಚ್ಯುತಿಗೊಳಿಸಿರುವುದಾಗಿ ಉಪವಿಭಾಗಾಧಿಕಾರಿ ಡಾ. ಮೈತ್ರಿ ಘೊಷಿಸಿದರು.

ಗ್ರಾಪಂ ಸದಸ್ಯ ತಂಬಿಹಳ್ಳಿ ಶ್ರೀನಿವಾಸ್​ ಮಾತನಾಡಿ, ಗ್ರಾಮ ಪಂಚಾಯಿತಿ ಅಧ್ಯೆ&ಉಪಾಧ್ಯಕ್ಷರು ಸದಸ್ಯರ ಕ್ಷೇತ್ರಗಳ ಅಭಿವೃದ್ಧಿಗೆ ಸಹಕರಿಸದೆ ಸಭೆ ಮಾಡದೇ ಕ್ಷೇತ್ರಗಳ ಬಗ್ಗೆ ಚರ್ಚಿಸದೆ ಸದಸ್ಯರನ್ನು ಕಡೆಗಾಣಿಸಿದ್ದರಿಂದ ಅವರ ಮೇಲೆ ಸದಸ್ಯರಿಗೆ ವಿಶ್ವಾಸವಿಲ್ಲದೆ ಅಧ್ಯಕ್ಷ&ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸಲಾಗಿದೆ. 13 ಸದಸ್ಯರು ಒಗ್ಗಟ್ಟಾಗಿ ಗ್ರಾಪಂ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ನಡೆಯುವ ಅಧ್ಯಕ್ಷ, ಉಪಾಧ್ಯಕ್ಷ ಸಾನದ ಚುನಾವಣೆಗಳಲ್ಲಿ ಆಯ್ಕೆ ಮಾಡಿಕೊಳ್ಳುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಗ್ರಾಪಂ ಸದಸ್ಯರಾದ ಮುನಿವೆಂಕಟಮ್ಮ, ಭಾಗ್ಯಮ್ಮ, ತೇಜವತಿ ಚನ್ನವಿರದೇವರು, ಬಿ.ಎಂ.ಶಾಂತಮ್ಮ, ರಾಮಾಂಜಿನಪ್ಪ, ತಸ್ಲೀಮಾ ಎಸ್​.ಪಾಷಾ, ಶೋಭಾ, ಎಚ್​.ವಿ. ಶ್ರೀಧರ್​, ಪಿಡಿಒ ದೀಪಾ, ಕಾರ್ಯದರ್ಶಿ ತುಳಸಿರಾಮ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net