ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ

abayya works
Published on

ಹುಬ್ಬಳ್ಳಿ: ಅಭಿವೃದ್ಧಿ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಲೇ ಇವೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಕಳಪೆ ಕಾಮಗಾರಿ ಕಂಡು ಬಂದಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು. ಕಾಮಗಾರಿ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಹು-ಧಾ ಪೂರ್ವ ಕ್ಷೇತ್ರದ ವಾರ್ಡ್ ಸಂಖ್ಯೆ 79ರಲ್ಲಿ ಬರುವ ಎಸ್.ಎಂ. ಕೃಷ್ಣಾ ನಗರ, ಅಲ್ತಾಫ್ ನಗರ ಮತ್ತು ಈಶ್ವರ ನಗರದಲ್ಲಿ ಒಟ್ಟು 1.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮತ್ತು ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಜನರು ಪಾವತಿಸುವ ತೆರಿಗೆ ಹಣದ ಸದ್ಬಳಕೆಯು ಸರ್ಕಾರದ ಮುಖ್ಯ ಧ್ಯೇಯವಾಗಿದೆ. ಗುತ್ತಿಗೆದಾರರು ಕಾಟಾಚಾರಕ್ಕೆ ಅಥವಾ ತಮ್ಮ ಲಾಭಗಳಿಕೆ ಉದ್ದೇಶದಿಂದ ಅರೆಬರೆ ಕಾಮಗಾರಿ ಮಾಡದೇ ಗುಣಮಟ್ಟದ ಕಾಮಗಾರಿ ಕೈಗೊಂಡು ಜನರಿಗೆ ಉತ್ತಮ ಸೇವೆ ಲಭಿಸುವಂತೆ ಮಾಡಬೇಕು. ಅಧಿಕಾರಿಗಳು ಸಹ ಕಾಮಗಾರಿ ಬಗ್ಗೆ ಗಮನ ಹರಿಸಿ ನಿರಂತರವಾಗಿ ಮೇಲುಸ್ತುವಾರಿ ಮಾಡಬೇಕೆಂದು ಸೂಚಿಸಿದರು.

ಪಾಲಿಕೆ ಮಾಜಿ ಸದಸ್ಯರಾದ ಅಲ್ತಾಫ್ ಕಿತ್ತೂರು, ಬಾಬಾಜಾನ ಕಾರಡಗಿ, ಖುದ್ದುಸ್ ಪಾಟೀಲ, ಮುಖಂಡರಾದ ಗೌಸುಸಾಬ್ ಕಾರಡಗಿ, ಮೀರಾಸಾಬ್ ನದಾಫ್, ಮೌಲಾಸಾಬ್ ಬೇಪಾರಿ, ನೌಶಾದ್ ಬಳ್ಳಾರಿ, ಜಮೀರ್ ಸವಣೂರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net