ಚಾಮುಂಡಿಬೆಟ್ಟದಲ್ಲಿ ವಾಣಿಜ್ಯೀಕರಣ ಬೇಡ : ಕರ್ನಾಟಕ ಗಂಧದಗುಡಿ ಫೌಂಡೇಷನ್ ಆಗ್ರಹ

Chamundi-hill
Published on

ಮೈಸೂರು: ಚಾಮುಂಡಿಬೆಟ್ಟ ಭೌಗೋಳಿಕವಾಗಿ ಎರಡು ವಿಧದ ಕಲ್ಲುಗಳಿಂದ ರಚಿತವಾಗಿದ್ದು, ನಮ್ಮ ನಾಡಿನಲ್ಲಿ ಈ ತರಹದ ಬೆಟ್ಟಗಳು ಇರುವುದು ವಿಶೇಷ. ಈ ಬೆಟ್ಟ ಕಾಂಕ್ರಿಟ್ ಕಟ್ಟಡಗಳನ್ನು ತಡೆಯುವ ಸಾಂದ್ರತೆ ಹೊಂದಿಲ್ಲದ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ಯಾವುದೇ ರೀತಿಯ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂದು ಕರ್ನಾಟಕ ಗಂಧದಗುಡಿ ಫೌಂಡೇಷನ್‌ನ ರಾಜ್ಯಾಧ್ಯಕ್ಷ ಮೋಹನ್‌ಕುಮಾರ್ ಆಗ್ರಹಿಸಿದರು.

ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಬೆಟ್ಟದಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸುವುದು ಸರಿಯಲ್ಲ. ಇಂತಹ ವಾಣಿಜ್ಯೀಕರಣ ಕಾರ್ಯದಿಂದ ಬೆಟ್ಟದ ಪರಿಸರವಷ್ಟೇ ಅಲ್ಲದೇ ನಗರದ ಪರಿಸರವೂ ಹಾಳಾಗುವುದಲ್ಲಿ ಯಾವುದೇ ಸಂಶಯವಿಲ್ಲ. ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಸಂದರ್ಭ ಬೆಟ್ಟದ ಕುರಿತು ತಿಳಿವಳಿಕೆ ಇರುವ ತಜ್ಞರೊಂದಿಗೆ ಸಭೆ ನಡೆಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಚಾಮುಂಡಿ ಬೆಟ್ಟವು ಹಲವು ಜೀವ ವೈವಿಧ್ಯತೆಗಳನ್ನು ಹೊಂದಿರುವ ಒಂದು ಅರಣ್ಯ ಮೀಸಲು ಪ್ರದೇಶವಾಗಿದೆ. ಅಲ್ಲಿ ಕಾಂಕ್ರೀಟಿಕರಣ ಮಾಡುವುದರಿಂದ ಜೀವ ವೈವಿಧ್ಯತೆಗಳನ್ನು ಸಂರಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಯಶೋದಾ, ಮನು ಗೋಪಾಲ್, ಮೀಮ್ಸ್ ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net