ಪೆರ್ನಾಜೆ ಶಾಲೆಯಲ್ಲಿ ಮಕ್ಕಳ ದಾಖಲಾತಿಗೆ ಅವಕಾಶವಿಲ್ಲ

saandarbhika chithra
saandarbhika chithra
Published on

ಪ್ರಮುಖ ಮುಖ್ಯಾಂಶಗಳು

  • ಶಾಲೆಯ ಮಾನ್ಯತೆಯನ್ನು ಕರ್ನಾಟಕ ಶಿಕ್ಷಣ ಕಾಯ್ದೆ ಅನ್ವಯ ರದ್ದುಪಡಿಸಲಾಗಿದೆ
ಮಂಗಳೂರು: ಪುತ್ತೂರು ತಾಲೂಕಿನ ಪೆರ್ನಾಜೆ ಶ್ರೀ ಸೀತಾ ರಾಘವ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಶಾಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಶೂನ್ಯ ದಾಖಲಾತಿ ಇರುವ ಕಾರಣದಿಂದ ಹಾಗೂ ಅನುದಾನ ಸಂಹಿತೆ ನಿಯಮದಂತೆ ಒಂದು ಬಾರಿಗೆ ಮಾತ್ರ ದಾಖಲಾತಿ ಮನ್ನಾ ಮಾಡಲು ಅವಕಾಶವಿದೆ. ಶಾಲೆಯಲ್ಲಿ ಹಿಂದಿನ ಎರಡು ಶೈಕ್ಷಣಿಕ ವರ್ಷಗಳಲ್ಲಿ ನಿಗದಿತ ಹಾಜರಾತಿ ಇಲ್ಲದ ಪ್ರಯುಕ್ತ ಶಾಲೆಯ ಮಾನ್ಯತೆಯನ್ನು ಕರ್ನಾಟಕ ಶಿಕ್ಷಣ ಕಾಯ್ದೆ ಅನ್ವಯ ರದ್ದುಪಡಿಸಲಾಗಿದೆ.
ಪ್ರಸ್ತುತ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶವಿಲ್ಲ. ಇದನ್ನು ಮೀರಿ ಪೋಷಕರು ಈ ಶಾಲೆಯಲ್ಲಿ ಮಕ್ಕಳನ್ನು ದಾಖಲಾತಿ ಮಾಡಿದಲ್ಲಿ ಶಾಲಾ ಶಿಕ್ಷಣ ಇಲಾಖೆ ಜವಾಬ್ದಾರರಲ್ಲವೆಂದು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net