ಸಂಪುಟ ಪುನಾರಚನೆ ಸದ್ಯಕ್ಕೆ ಇಲ್ಲ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಲ್ಲ : ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ

Mallikarjun Kharge
Published on

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಲ್ಲ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ | ಕುಂಭಮೇಳ ಕಾಲ್ತುಳಿತ ಯಾರು ರಾಜೀನಾಮೆ ಕೊಟ್ರು?

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಸಿಎಂ, ಡಿಸಿಎಂ ಜತೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯದಲ್ಲಿ ಹೊಸ ಮಂತ್ರಿ ಮಂಡಲ ಪುನಾರಚನೆ, ವಿಸ್ತರಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆ ನಡೆದಿಲ್ಲ. ಈ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡಲ್ಲ ಎಂದು ಎಐಸಿಸಿ ಅಧ್ಯP್ಷÀರಾದ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ದೆಹಲಿಯಲ್ಲಿ ಲೋಕಸಭೆ ವಿಪP್ಷÀ ನಾಯಕ ರಾಹುಲ್ ಗಾಂಧಿ ಹಾಗೂ ತಮ್ಮನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಭೇಟಿ ಮಾಡಿದ್ದಾರೆ.ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ಘಟನೆ, ರಾಜ್ಯದಲ್ಲಿನ ಜಾತಿ ಗಣತಿ, ಸರ್ಕಾರದ ಆಡಳಿತ ಸೇರಿ ಪಕ್ಷದ ಆಂತರಿಕ ವಿಚಾರಗಳನ್ನು ಚರ್ಚಿಸಲಾಗಿದೆ. ಆದರೆ, ಈಗ ಸಂಪುಟ ಹಾಗೂ ಕೆಪಿಸಿಸಿ ಅಧ್ಯಕ್ಷರಲ್ಲಿ ಯಾವ ಬದಲಾವಣೆಗಳು ಇಲ್ಲ ಎಂದರು.

ಕಾಲ್ತುಳಿತದAತಹ ಘಟನೆ ನಡೆಯಬಾರದಿತ್ತು. ಇಂತಹ ಅನಾಹುತ ಆಗದಂತೆ ನೋಡಿಕೊಳ್ಳಬೇಕು. ತಪ್ಪು ಯಾರದ್ದು ಎಂಬುದು ತಿಳಿದು ಶಿಕ್ಷೆ ಕೊಡಬೇಕು. ಸಂತ್ರಸ್ತರ ನೆರವಿಗೆ ನಿಲ್ಲುವಂತೆ ರಾಹುಲ್ ಗಾಂಧಿ ಸ್ಪಷ್ಟ ಸೂಚನೆ ನೀಡಿದ್ದಾರೆ.ಅದರಂತೆ ಸರ್ಕಾರ ಸಹ ನಡೆದುಕೊಂಡಿದೆ ಎಂದರು.

ರಾಜೀನಾಮೆ ನೀಡಬೇಕು ಎಂಬ ಬಿಜೆಪಿಯವರು ಒತ್ತಾಯಿಸುತ್ತಿರುವುದು ಸರಿಯಲ್ಲ. ಯಾವುದೇ ಕೆಲಸ ಉz್ದೆÃಶ ಪೂರ್ವಕ ಮಾಡಿದ್ದರೆ ರಾಜೀನಾಮೆ ನೀಡಬೇಕು. ಬೆಂಗಳೂರಿನಲ್ಲಿ ನಡೆದಿದ್ದು ಆಕಸ್ಮಿಕ ಘಟನೆ. ಕ್ಷಮೆ ಕೇಳಿದ್ದಾರೆ. ಕುಂಭಮೇಳದಲ್ಲಿ ಲಕ್ಷಾಂತರ ಜನರು ಸೇರಿ ಕಾಲ್ತುಳಿತವಾದಾಗ, ಮಾತಾಡಿದ್ದಕ್ಕೆ ನನಗೆ ಬೈದರು. ದೆಹಲಿಯಲ್ಲಿ ಕಾಲ್ತುಳಿತವಾಯಿತು. ಕುಂಭಮೇಳದಲ್ಲಿ ಆ ಮೇಲೆ ಒಂದೊAದೆ ಹೆಣ ಹೊರಬಂದವು. ಆಗ ಯಾರು ರಾಜೀನಾಮೆ ನೀಡಿದರು ಎಂದru ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

೧೧ ವರ್ಷದಲ್ಲಿ ಇಷ್ಟು ಸುಳ್ಳು ಹೇಳಿ ದೇಶದ ಯುವಕರಿಗೆ ದೋಖಾ ಮಾಡಿದ ಮೊದಲ ಪ್ರಧಾನಿ ಮೋದಿ ಆಗಿದ್ದಾರೆ. ೬೫ ವರ್ಷದಿಂದ ನಾನು ರಾಜಕೀಯದಲ್ಲಿದ್ದು, ಇಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿಲ್ಲ. ನೋಟ್ ಬಂದಿ, ಎಂಎಸ್‌ಪಿ ಸೇರಿ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಕಾಶ್ಮೀರದಲ್ಲಿ ಹಿಂದಿನ ಪ್ರಧಾನಿಗಳು ಮಾಡಿದ ಕೆಲಸವನ್ನು ಮೋದಿ ಸ್ಮರಿಸುವುದಿಲ್ಲ.

| ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ವಿಪಕ್ಷ ನಾಯಕ ರಾಜ್ಯಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net