ಹೆಬಸೂರಿನಲ್ಲಿ ನೋ ಬ್ಯಾಗ್ ಡೇ

HEBSUR
Published on

ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಶನಿವಾರ ನೋ ಬ್ಯಾಗ್ ಡೇ ಆಚರಿಸಲಾಯಿತು.

ವಿದ್ಯಾರ್ಥಿಗಳು ಪಠ್ಯ ಪುಸ್ತಕ ತುಂಬಿದ ಭಾರವಾದ ಬ್ಯಾಗ್ ಇಲ್ಲದೇ ಶಾಲೆಗೆ ಬಂದಿದ್ದರು. ಕ್ರಿಯಾಶೀಲ ಚಟುವಟಿಕೆಗಳನ್ನು ಪ್ರದರ್ಶಿಸಿ ಸಂಭ್ರಮ ಪಟ್ಟರು.

ವಿದ್ಯಾರ್ಥಿನಿಯರು ಜಾನಪದ ಗೀತೆ, ಹಾಸ್ಯ ಗೀತೆ, ಲಂಬಾಣಿ ನೃತ್ಯ, ಮಿಮಿಕ್ರಿ, ಸುಗ್ಗಿ ಹಾಡು, ಇತ್ಯಾದಿ ಕ್ರಿಯಾಶೀಲ ಚಟುವಟಿಕೆಗಳನ್ನು ಪ್ರದರ್ಶಿಸಿದರು. ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಸಿಆರ್​ಪಿ ದುರಗೇಶ ಮಾದರ, ಲತಾ ಗ್ರಾಮಪುರೋಹಿತ, ಶಾರದಾ ಕಂಬಳಿ, ದ್ರಾಕ್ಷಾಯಿಣಿ ಕೊರಗರ, ದೇವೇಂದ್ರ ಪತ್ತಾರ, ಸುಧಾ ಕೊಣ್ಣೂರ, ಸುವರ್ಣ ಮಡಿವಾಳರ, ಗೀತಾ ಕೆಂಚರಡ್ಡಿ, ಇತರರು ಇದ್ದರು.

ಶಿಕ್ಷಣ ಇಲಾಖೆಯ ನಿರ್ದೇಶನದ ಮೇರೆಗೆ ಪ್ರತಿ ತಿಂಗಳ ಮೂರನೇ ಶನಿವಾರದಂದು ನೋ ಬ್ಯಾಗ್ ಡೇ ಆಚರಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net