ಅರಣ್ಯ ಸಂರಕ್ಷಣಾ ಮಸೂದೆಗೆ ತಿದ್ದುಪಡಿ ಬೇಡ

SIRSI NAKAY
Published on

ಶಿರಸಿ: ಅರಣ್ಯ ಸಂರಕ್ಷಣಾ ಮಸೂದೆಗೆ ತಿದ್ದುಪಡಿ ಮಾಡುವುದನ್ನು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ವಿರೋಧಿಸುತ್ತದೆ. ಮಸೂದೆಗೆ ತಿದ್ದುಪಡಿ ತರುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಶನಿವಾರ ಅರಣ್ಯ ಸಂರಕ್ಷಣಾ ಮಸೂದೆ ಕೇಂದ್ರ ಸರ್ಕಾರ ಜಾರಿಗೆ ತರಲು ಪ್ರಯತ್ನಿಸುತ್ತಿರುವ ಅರಣ್ಯ ಸಂರಕ್ಷಣಾ ತಿದ್ದುಪಡಿಯ ಪ್ರತಿಯನ್ನು ಪ್ರದರ್ಶಿಸಿ ಅವರು ಮಾತನಾಡಿದರು.

ತಲತಲಾಂತರದಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಅರಣ್ಯವಾಸಿಗಳಿಗೆ ಈ ತಿದ್ದುಪಡಿ ಸಂಕಷ್ಟ ತರಲಿದೆ. ಔದ್ಯೋಗಿಕರಣ, ಗಣಿಗಾರಿಕೆ, ಕಲ್ಲಿದ್ದಲು ಮುಂತಾದ ಅರಣ್ಯೇತರ ಮತ್ತು ಪರಿಸರ ವಿರೋಧಿ ಚಟುವಟಿಕೆಗೆ ಕಾನೂನನ್ನೇ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಹೊರಟಿರುವುದು ಖಂಡನಾರ್ಹ ಎಂದರು. ಮಂಜುನಾಥ ಕಲಕೈ, ಗೋಪಾಲ ತ್ಯಾರ್ಸಿ, ವೆಂಕಟ್ರಮಣ ಗೊದ್ದಲಮನೆ, ವಿಜಯಕುಮಾರ, ಅಣ್ಣಪ್ಪ ಸಂಪಖಂಡ, ತಾರಾನಾಥ ಹೇರೂರ್, ಗೋದಾವರಿ ಬಿ.ಆರ್., ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net