ಸಿಡಿ ಪ್ರಕರಣದಲ್ಲಿ ಪಾತ್ರ ಇಲ್ಲ: ಮಂಗಳೂರಿನಲ್ಲಿ ರಾಜಶೇಖರ ಮುಲಾಲಿ ಹೇಳಿಕೆ

malalali
Published on

ಮಂಗಳೂರು: ಸಿಡಿ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ಆದರೆ ಪ್ರಕರಣದ ಸಂತ್ರಸ್ತೆ ರಕ್ಷಣೆ ಕೋರಿದರೆ ಆಕೆ ಪರ ಸುಪ್ರೀಂ ಕೋರ್ಟ್ ತನಕವೂ ಹೋರಾಟ ನಡೆಸಲು ಸಿದ್ಧ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ನಡೆದಿರುವ ಚರ್ಚೆಯಲ್ಲಿ ನನ್ನ ಹೆಸರನ್ನು ಹಲವರು ಪ್ರಸ್ತಾಪಿಸಿದ್ದಾರೆ.

ಇದನ್ನು ಕಡತದಿಂದ ತೆಗೆದು ಹಾಕಲು ಸಭಾಧ್ಯಕ್ಷರಿಗೆ ಮನವಿ ಮಾಡುತ್ತೇನೆ. ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ಪರಿಷತ್ತನ್ನು ಭ್ರಷ್ಟಾಚಾರ ಮುಕ್ತ ಮಾಡಲಾಗುವುದು. ಜಾತಿ ರಾಜಕೀಯ, ನಿವೃತ್ತ ಅಧಿಕಾರಿಶಾಹಿಗಳ ರಾಜಕಾರಣ, ಸೀಮಿತ ಜನರಿಂದ ಪರಿಷತ್ತನ್ನು ಮುಕ್ತ ಗೊಳಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net