ಎನ್‌ಎಂಪಿಎ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆ ಖಾಸಗೀಕರಣಕ್ಕೆ ವಿರೋಧ

mng-1mar NMPA 2
ಎನ್‌ಎಂಪಿಎ ಆಡಳಿತಕ್ಕೊಳಪಟ್ಟ ಆಸ್ಪತ್ರೆಯನ್ನು ಖಾಸಗೀ ಸಹಭಾಗಿತ್ವದಲ್ಲಿ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆ ಮಾಡುವ ಪ್ರಸ್ತಾವನೆ ವಿರೋಧಿಸಿ ಎನ್‌ಎಂಪಿಟಿಯ ನಿವೃತ್ತ ನೌಕರರ ಸಂಘದ ಸದಸ್ಯರು ಪಣಂಬೂರಿನಲ್ಲಿರುವ ಆಡಳಿತ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.
Published on

ಮಂಗಳೂರು: ಎನ್‌ಎಂಪಿಎ ಆಡಳಿತಕ್ಕೊಳಪಟ್ಟ ಆಸ್ಪತ್ರೆಯನ್ನು ಖಾಸಗೀ ಸಹಭಾಗಿತ್ವದಲ್ಲಿ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆ ಮಾಡುವ ಪ್ರಸ್ತಾವನೆಗೆ ಎನ್‌ಎಂಪಿಟಿಯ ನಿವೃತ್ತ ನೌಕರರ ಸಂಘವಾದ ಪೆನ್ಷನರ್ಸ್ ವೆಲ್‌ೇರ್ ಎಸೋಸಿಯೇಷನ್ ಸದಸ್ಯರು ತೀವ್ರ ವಿರೋಧ ವ್ಯಕ್ತ ಪಡಿಸಿ ಶುಕ್ರವಾರ ಪಣಂಬೂರಿನಲ್ಲಿರುವ ಆಡಳಿತ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.
ಅಲ್ಲಿನ ಆಸ್ಪತ್ರೆ ಮುಂಭಾಗದಿಂದ ಆಡಳಿತ ಸೌಧದ ವರೆಗೆ ಕಪ್ಪು ಪಟ್ಟಿ ಧರಿಸಿ ಮೆರವಣಿಗೆ ನಡೆಸಿದರು. ಹಿರಿಯ ಸಲಹೆಗಾರ ಕೆ.ಎಂ ಪೌಲ್ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ವಿಮಾನ ನಿಲ್ದಾಣ, ಬಂದರು, ಹೀಗೆ ಖಾಸಗೀಕರಣ ಮಾಡಿದ್ದನ್ನು ನೋಡಿದ್ದೇವೆ. ಇದೀಗ ಸರ್ಕಾರದ ಒಂದು ಆಸ್ಪತ್ರೆಯನ್ನು ಖಾಸಗೀಯವರಿಗೆ ಹಸ್ತಾಂತರಿಸುತ್ತಿರುವುದು ಖದಕರ. ಹಿರಿಯ ನೌಕರರು ನಿವೃತ್ತರಾಗಿ ಚಿಕಿತ್ಸೆಯ ಆಧಾರದಲ್ಲಿ ಬದುಕಿದ್ದಾರೆ.ಇಲ್ಲಿನ ಚಿಕಿತ್ಸೆ ಅತ್ಯುತ್ತಮವಾಗಿತ್ತು. ಮುಂದೆ ನಮಗೆ, ಕುಟುಂಬಕ್ಕೆ ಸೌಲಭ್ಯವಿಲ್ಲದಂತೆ ಮಾಡುವುದರ ಬಗ್ಗೆ ನಾವು ಜಾಗೃತರಾಗಿರಬೇಕು. ನಮ್ಮ ಸತತ ಪತ್ರ ವ್ಯವಹಾರ, ವಿರೋಧವನ್ನು ಬಂದರು ಆಡಳಿತ ಪರಿಗಣಿಸದೆ ನಿರ್ಲಕ್ಷೃ ಮಾಡಿದೆ. ಸರ್ಕಾರಿ ಉಚಿತ ಸೌಲಭ್ಯ ನಿಲ್ಲಿಸಿ ಇನ್ನು ಮುಂದೆ ಹಣಪಡೆದು ಚಿಕಿತ್ಸೆ ತೆಗೆದುಕೊಳ್ಳುವ ಸ್ಥಿತಿಗೆ ದೂಡುತ್ತಿದೆ. ಆಸ್ಪತ್ರೆಯನ್ನು ಸರ್ಕಾರ ಅಭಿವೃದ್ಧಿ ಮಾಡುವುದಿದ್ದರೆ ನಮಗೆ ಅಭ್ಯಂತರವಿಲ್ಲ. ಆದರೆ ಖಾಸಗೀ ಯಾಕೆ ಬೇಕು. ತರಾತುರಿಯಲ್ಲಿ ನಿರ್ಧಾರ ಮಾಡಿ ತೀರ್ಮಾನ ಮಾಡಿರುವುದು ನೌಕರರಿಗೆ ಮಾಡಿದ ಅನ್ಯಾಯ ಎಂದರು.
ಪ್ರಮುಖರಾದ ಉಪಾಧ್ಯಕ್ಷ ತಾರಾನಾಥ್ ಬೋಳಾರ್, ಕಾರ್ಯದರ್ಶಿ ಪೂವಪ್ಪ ನಾಕ್, ಕೆ.ಜಯಂತ್ ಕುಮಾರ್, ಜಯದೇವಾಡಿಗ, ಸಿ. ಲೆವ್ವಿ, ಸೆಲಿನಾ ಪಿಂಟೋ, ಉಷಾ, ಎಚ್.ಬಿ ಸೀತಾರಾಂ, ಕಾರ್ಯಕಾರಿ ಸಮಿತಿ ಸದಸ್ಯರು, ಪೆನ್ಷನರ್ಸ್ ಎಸೋಸಿಯೇಷನ್ ಸದಸ್ಯರು ಮೊದಲಾದವರಿದ್ದರು.ತಾರಾನಾಥ್ ಬೋಳಾರ್ ವಂದಿಸಿದರು.

ಪಿ.ಪಿ.ಪಿ. ಸಹಭಾಗಿತ್ವದಿಂದ ಉತ್ತಮ ಸೇವೆ ಸಾಧ್ಯ
ಬಡವರ ಏಳಿಗೆಯನ್ನು ಸಹಿಸದ ಕೆಲವೊಂದು ವ್ಯಕ್ತಿಗಳು, ಪೆನ್ನನರ್ ಅಸೋಸಿಯೇಶನ್‌ರವರೊಂದಿಗೆ ಕೈಜೋಡಿಸಿ ಕೇಂದ್ರ ಸರ್ಕಾರದ ಜನಪರ ನೀತಿಗಳ ವಿರುದ್ಧ ಕಾರ್ಯವೆಸಗುತ್ತಿದ್ದಾರೆ. ಭಾರತದ ಉದಾತ್ತವಾದ ನಿಲುವಿನಿಂದ ಮಲ್ಟಿ-ಸ್ಪೆಶಾಲಿಟಿ (ಪಿ.ಪಿ.ಪಿ.) ಆಸ್ಪತ್ರೆಯನ್ನು ಬಡವರು, ದೀನ-ದಲಿತರು ಹಾಗೂ ಶೋಷಿತರು ಸೇರಿದಂತೆ ಪಣಂಬೂರು ಆಸುಪಾಸಿನ ಹಾಗೂ ಸಮಸ್ತ ಮಂಗಳೂರಿನ ಜನತೆಗೆ ನೆರವಾಗಲು ನವ ಮಂಗಳೂರು ಬಂದರು ಪ್ರಾಧಿಕಾರದ ಮೂಲಕ ಕಾರ್ಯಗತಗೊಳಿಸಲು ಸ್ಥಾಪಿಸಲಾಗಿದೆ. ಆಸ್ಪತ್ರೆಯನ್ನು ಬಂದರು ಪ್ರಾಧಿಕಾರದ ಉದ್ಯೋಗಿಗಳು, ಪೆನ್ಸ್‌ನರ್‌ಗಳು ಸೇರಿದಂತೆ, ಜನಸಾಮಾನ್ಯರ ಗಮನದಲ್ಲಿಟ್ಟುಕೊಂಡು ರಚಿಸಲಾಗುತ್ತದೆ. ಎನ್‌ಎಂಪಿಎ ಆಡಳಿತಕ್ಕೊಳಪಟ್ಟ ಆಸ್ಪತ್ರೆಯನ್ನು ಖಾಸಗೀ ಸಹಭಾಗಿತ್ವದಲ್ಲಿ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆ ಮಾಡುವುದರಿಂದ ಉತ್ತಮ ಹಾಗೂ ಹೆಚ್ಚಿನ ಆರೋಗ್ಯ ಸೇವೆ ಲಭಿಸಲಿದೆ ಎಂದು ಎನ್‌ಎಂಪಿಎ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net