ಮೂಲಭೂತ ವ್ಯವಸ್ಥೆ ಸುಧಾರಣೆ ಬಂದರುಗಳ ಪ್ರಮುಖ ಜವಾಬ್ದಾರಿ, ಸಾಗರ ಪ್ರತಿಕೂಲತೆ ಕಾರ‌್ಯಾಗಾರ ಉದ್ಘಾಟಿಸಿ ಎನ್‌ಎಂಪಿಎ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು

port
ನವಮಂಗಲೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಡಲಿನ ಪ್ರತಿಕೂಲತೆ ಕಾರ‌್ಯಾಗಾರವನ್ನು ಎನ್‌ಎಂಪಿಎ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು ಉದ್ಘಾಟಿಸಿದರು. ಭಾರತ ಸರ್ಕಾರದ ನಾಟಿಕಲ್ ಸಲಹೆಗಾರ ಕ್ಯಾಪ್ಟನ್ ಎಲ್.ಕೆ.ಪಾಂಡಾ, ಐಪಿಎ ಸಲಹೆಗಾರ ಡಾ. ಆರ್.ಡಿ.ತ್ರಿಪಾಠಿ ಸೇರಿದಂತೆ ಹಲವರು ಇದ್ದರು.
Published on

ಮಂಗಳೂರು: ಬಂದರುಗಳ ಬಹಳ ಮುಖ್ಯವಾದ ಜವಾಬ್ದಾರಿ ಮೂಲಭೂತ ವ್ಯವಸ್ಥೆಗಳನ್ನು ಸುಧಾರಣೆ ತರುವುದು. ದೇಶದಲ್ಲಿ 11 ಬಂದರು ಹಾಗೂ 1 ಕಂಪನಿಯೊಂದಿರುವ ಬಂದರುಗಳು ಕೇಂದ್ರದ ನಿಯಮವಳಿಗಳನ್ನು ಪಾಲಿಸಿಕೊಂಡು ಮೂಲಭೂತ ವ್ಯವಸ್ಥೆಗಳನ್ನು ಸುಧಾರಿಸುತ್ತಿದೆ ಎಂದು ಮಂಗಳೂರು ನವ ಬಂದರು ಪ್ರಾಧಿಕಾರ(ಎನ್‌ಎಂಪಿಎ) ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು ಹೇಳಿದರು.

ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಕಡಲಿನ ಪ್ರತಿಕೂಲತೆ ಕಾರ‌್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಉತ್ಪನ್ನಗಳ ಗುಣಮಟ್ಟದ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಸಾಗಾಟ ವ್ಯವಸ್ಥೆಯಲ್ಲಿ ಇರುವ ವೆಚ್ಚವನ್ನು ನಿಯಂತ್ರಣ ಮಾಡುವುದು ಅನಿವಾರ್ಯ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳ ಮೂಲಕ ಸಹಕಾರ ನೀಡುತ್ತಿದೆ. ಆಮದು ರ್ತುಗಳು ಇಲ್ಲದೇ ಬಂದರುಗಳು ಮುಂದೆ ಸಾಗೋದಿಲ್ಲ. ಆದರೆ ರಫ್ತಿಗೆ ಹೆಚ್ಚಿನ ಉತ್ತೇಜನ ನೀಡುವ ಜತೆಯಲ್ಲಿ ಸಾಗಾಟ ವೆಚ್ಚವನ್ನು ಕಡಿಮೆ ಮಾಡಿದರೆ ಮಾತ್ರ ಲಾಭವಾಗುತ್ತದೆ ಎಂದರು.

ಭಾರತ ಸರ್ಕಾರದ ನಾಟಿಕಲ್ ಸಲಹೆಗಾರ ಕ್ಯಾಪ್ಟನ್ ಎಲ್.ಕೆ.ಪಾಂಡಾ, ಐಪಿಎ ಸಲಹೆಗಾರ ಡಾ. ಆರ್.ಡಿ.ತ್ರಿಪಾಠಿ ಅವರು ಕಡಲ ಪ್ರತಿಕೂಲತೆ ವಿವಿಧ ಸಾಧ್ಯತೆಗಳು ಮತ್ತು ಸಂದರ್ಭಗಳು ಮತ್ತು ಅದಕ್ಕೆ ಪ್ರತಿಕ್ರಿಯಿಸುವ ಕಾರ‌್ಯ ವಿಧಾನಗಳ ಕುರಿತು ಉಪನ್ಯಾಸ, ಚರ್ಚೆ ನಡೆಸಿದರು

ಎನ್‌ಎಂಪಿಎ ಉಪಾಧ್ಯಕ್ಷ ಕೆ.ಜಿ.ನಾಥ್, ಕೋಸ್ಟ್ ಗಾರ್ಡ್‌ನ ಡಿಐಜಿ ಪಿ.ಕೆ. ಮಿಶ್ರಾ, ಎನ್‌ಎಂಪಿಎ ಡೆಪ್ಯುಟಿ ಕನ್ಸರ್‌ವೇಟಿವ್ ಅಧಿಕಾರಿ ಕ್ಯಾ. ಎಸ್.ಆರ್. ಪಾಟ್ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

-----------------------------

ರಫ್ತಿನ ವಿಚಾರದಲ್ಲಿ ಸಾಗಾಟ ವೆಚ್ಚವನ್ನು ನಿಯಂತ್ರಣ ಮಾಡುವುದರ ಮೂಲಕ ಚೀನಾ, ೆಸಿಫಿಕ್ ದೇಶಗಳ ಮುಂದೆ ಸ್ಪರ್ಧೆಯನ್ನು ನೀಡಬಹುದು. ದೇಶದ ಜಿಡಿಪಿಯಲ್ಲಿ ಅಭಿವೃದ್ಧಿ ಜತೆಗೆ ಜನರ ತಲಾ ಆದಾಯದಲ್ಲೂ ಪ್ರಗತಿಯನ್ನು ದಾಖಲಿಸಿಕೊಳ್ಳಬಹುದು. ಇದರಿಂದ ದೇಶದ ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಜತೆಯಲ್ಲಿ ಅವರನ್ನು ಬಡತನದ ರೇಖೆಗಿಂತ ಮೇಲಕ್ಕೆ ಎತ್ತುವ ಎಲ್ಲ ಕಾರ‌್ಯಗಳು ಇದರಿಂದ ಸಾಧ್ಯವಾಗಲಿದೆ.

ಡಾ. ವೆಂಕಟರಮಣ ಅಕ್ಕರಾಜು, ಅಧ್ಯಕ್ಷರು

ನವ ಬಂದರು ಪ್ರಾಧಿಕಾರ(ಎನ್‌ಎಂಪಿಎ) ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net