ಭ್ರಷ್ಟಾಚಾರ ನಿರ್ಮೂಲನೆಯಿಂದ ಸಮಾಜ ಸುರಕ್ಷಿತ - ಎನ್ .ಸಂತೋಷ್ ಹೆಗ್ಡೆ

KCA_7672
Published on


ಮಂಗಳೂರು : ನವ ಮಂಗಳೂರು ಬಂದರು ಪ್ರಾಧಿಕಾರದ ವತಿಯಿಂದ ವಿಜಿಲೆನ್ಸ್ ಜಾಗೃತಿ ಸಪ್ತಾಹ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಎನ್‌ಎಂಪಿಎ ವಿಜಿಲೆನ್ಸ್ ಆನ್‌ಲೈನ್ ದೂರುಗಳ ಪೋರ್ಟಲ್ ಉದ್ಘಾಟಿಸಿದ ನಿವೃತ್ತ ನ್ಯಾಯಮೂರ್ತಿ ಎನ್ .ಸಂತೋಷ್ ಹೆಗ್ಡೆ ಅಪ್ರಾಮಾಣಿಕತೆಯನ್ನು ಬಹಿಷ್ಕರಿಸುವ ಮತ್ತು ಪ್ರಾಮಾಣಿಕತೆಯನ್ನು ಗೌರವಿಸುವ ಯುವ ಪೀಳಿಗೆಯಿಂದ ಸಮಾಜ ಸುರಕ್ಷಿತವಾಗಿರುತ್ತದೆ. ಭ್ರಷ್ಟಾಚಾರಕ್ಕೆ ಜನರಲ್ಲಿರುವ ದುರಾಸೆಯೇ ಕಾರಣ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ.ಎ.ವಿ.ರಮಣ ಮಾತನಾಡಿ ‘ ಭ್ರಷ್ಟಾಚಾರ ತಡೆಗಟ್ಟುವ ಜಾಗೃತ ಉಪಕ್ರಮದಡಿಯಲ್ಲಿ ಆನ್‌ಲೈನ್ ವಿಜಿಲೆನ್ಸ್ ದೂರು ಪೋರ್ಟಲ್ ಪ್ರಾರಂಭಿಸಲಾಗಿದೆ .ತಂತ್ರಜ್ಞಾನದ ಮೂಲಕ ಪಾರದರ್ಶಕತೆ ಹೆಚ್ಚಿಸಲು ಮತ್ತು ಬಂದರಿನಲ್ಲಿನ ದುಷ್ಕೃತ್ಯವನ್ನು ತಪ್ಪಿಸಲು ಆನ್‌ಲೈನ್ ಇ-ಹಿಂಡ್ರೆನ್ ರಿಜಿಸ್ಟರ್ ಪರಿಚಯಿಸಲಾಗಿದೆ ’ ಎಂದರು.
ರಾಜ್ಯ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಡಾ. ಸುಭಾಷ್ ಚಂದ್ರ ಖುಂಟಿಯಾ ಮುಖ್ಯ ಅತಿಥಿಯಾಗಿದ್ದರು. ವಿಜಿಲೆನ್ಸ್ ಜಾಗೃತಿ ಸಪ್ತಾಹದ ಅಂಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಬಂದರಿನ ವಿದ್ಯಾರ್ಥಿಗಳು ಮತ್ತು ನೌಕರರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ವಿಜಿಲೆನ್ಸ್ ಅಧಿಕಾರಿ ಪದ್ಮನಾಭ ಚಾಹರ್.ಕೆ.ಸ್ವಾಗತಿಸಿದರು.
ಸಮಾರೋಪದ ಅಂಗವಾಗಿ ಪಣಂಬೂರು ಬೀಚ್‌ನಲ್ಲಿ ಮರಳು ಕಲೆ ಮೂಲಕ ಮೂಲಕ ಭ್ರಷ್ಟಾಚಾರ ವಿರೋಧಿ ಜಾಗೃತಿ ಸಂದೇಶವನ್ನು ಹರಡಲಾಯಿತು. ನೃತ್ಯ ಕಾರ್ಯಕ್ರಮ ಆಯೋಜಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net