ಎನ್ಕೆಎಸ್ಎಸ್ಐಗೆ ನಲವಡಿ ಅಧ್ಯಕ್ಷ

IMG-20231001-WA0019-1.jpg
Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಎನ್ಕೆಎಸ್ಎಸ್ಐ) 60ನೇ ವಾಷಿರ್ಕ ಸಭೆಯು ಶನಿವಾರ ಜರುಗಿತು.

2023-25ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಗಿರೀಶ ನಲವಡಿ, ಉಪಾಧ್ಯಕ್ಷರಾಗಿ ಅಶೋಕ ಕುನ್ನೂರ, ಅಶೋಕ ಕಲಬುಗಿರ್, ಅನಿಲ ಜೈನ್, ಗೌರವ ಕಾರ್ಯದಶಿರ್ಯಾಗಿ ಶಂಕರ ಹಿರೇಮಠ, ಜಂಟಿ ಗೌರವ ಕಾರ್ಯದಶಿರ್ಯಾಗಿ ಭರತ್ ಕುಲಕಣಿರ್ ಮತ್ತು ಖಜಾಂಚಿಯಾಗಿ ರಮೇಶ ಯಾದವಾಡ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸುರೇಶ ಟಕ್ಕರ್ ಘೋಷಣೆ ಮಾಡಿದರು.

15ಜನ ಆಡಳಿತ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಮಾಜಿ ಅಧ್ಯಕ್ಷರಾದ ಜಯಪ್ರಕಾಶ ಟೆಂಗಿನಕಾಯಿ, ಲಕ್ಷ್ಮಿಕಾಂತ ಪಾಟೀಲ, ನಾಗರಾಜ ದಿವಟೆ, ವಿಶ್ವನಾಥ ಗೌಡರ, ನಿಂಗಣ್ಣ ಬಿರಾದಾರ, ಹಿರಿಯ ಉದ್ಯಮಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net