

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ವಿಮಾನ ನಿಲ್ದಾಣ ಬಳಿಯ ಕೆಎಲ್ಇ ಐಟಿ ಸೆಮಿನಾರ್ ಹಾಲ್ ನಲ್ಲಿ ಕೆಎಲ್ಇ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಐಇಇಇ ಉತ್ತರ ಕರ್ನಾಟಕ ಸಬ್ಸೆಕ್ಶನ್ (ಎನ್ಕೆಎಸ್ಎಸ್) ವತಿಯಿಂದ ಹೋಲಿಸ್ಟಿಕ್ ಇಂಜಿನಿಯರಿಂಗ್ ಫಾರ್ ಸಸ್ಟೆನೇಬಲ್ ಡೆವಲಪ್‌ಮೆಂಟ್ ಕುರಿತು 4ನೇ ಅಂತಾರಾಷ್ಟ್ರೀಯ ಸಮ್ಮೇಳನ ಎನ್ಕೆ ಕಾನ್ಫರನ್ಸ್ 25 ಅನ್ನು ಸೆ. 27ರಿಂದ ಎರಡು ದಿನಗಳ ಕಾಲ ಆಯೋಜಿಸಲಾಗಿದೆ.
ಸೆ. 27ರಂದು ಬೆಳಗ್ಗೆ 11.30ಕ್ಕೆ ನಡೆಯುವ ಉದ್ಘಾಟನೆ ಸಮಾರಂಭದಲ್ಲಿ ಕೆಎಲ್ಇ ತಾಂತ್ರಿಕ ವಿವಿ ಕುಲಪತಿ ಡಾ. ಪ್ರಕಾಶ ತೆವರಿ, ಮಲೇಷಿಯಾದ ಏರೋಸ್ಪೇಸ್ ಬಿಜಿನೆಸ್ ಯುನಿಟ್ ಟ್ಯಾಲೆಂಟ್ ಡೆವಲಪಮೆಂಟ್ ಕೋಆರ್ಡಿನೇಟರ್ ಡಾ. ಯೊಂಗ್ ಚಿನ್ ಕೂ ಅತಿಥಿಗಳಾಗಿ ಪಾಲ್ಗೊಳ್ಳುವರು.
ಐಇಇಇ ಎನ್ಕೆಎಸ್ಎಸ್ 2022ರ ಚೇರ್ಮನ್ ಡಾ. ಬಸವರಾಜ ಅನಾಮಿ, ಹಾವೇರಿ ವಿವಿ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಉಪಸ್ಥಿತರಿರುವರು.
ಕೆಎಲ್ಇ ಐಟಿ ಸ್ಥಳಿಯ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಸಿ. ಮೆಟಗುಡ್ಡ ಅಧ್ಯಕ್ಷತೆ ವಹಿಸುವರು. ಶೈಕ್ಷಣಿಕ ಜ್ಞಾನ ಹಾಗೂ ಉದ್ಯಮಗಳನ್ನು ಒಂದೇ ವೇದಿಕೆಯಲ್ಲಿ ತಂದು ಸುಸ್ಥಿರ ಇಂಜಿನಿಯರಿಂಗ್ ಗೆ ಬೇಕಾದ ಪರಿಹಾರಗಳನ್ನು ಕಂಡುಕೊಳ್ಳಲು ಸಮ್ಮೇಳನ ನೆರವಾಗಲಿದೆ ಎಂದು ಕೆಎಲ್ಇ ಐಟಿ ಪ್ರಾಚಾರ್ಯ ಡಾ. ಮನು ಟಿ.ಎಂ. ತಿಳಿಸಿದ್ದಾರೆ.