ರಸ್ತೆ ಬದಿ ಮುಳ್ಳಿನ ಗಿಡಗಳ ತೆರವು

Oplus_131072
Oplus_131072
Published on

ನಂಜನಗೂಡು : ರಸ್ತೆ ಬದಿಯ ಮುಳ್ಳು ಗಿಡಗಳನ್ನು ತೆರವುಗೊಳಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ವತಿಯಿಂದ ಹೆಡತಲೆ ಗ್ರಾಮ ಪಂಚಾಯಿತಿ ಎದುರು ಸೋಮವಾರ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಎಚ್ಚೆತ್ತುಗೊಂಡ ಅಧಿಕಾರಿಗಳು ತಕ್ಷಣವೇ ಕ್ರಮ ವಹಿಸಿದ್ದಾರೆ. ಹೆಡತಲೆ ಮತ್ತು ಶ್ರೀನಗರ ಗ್ರಾಮದ ಸುಮಾರು 1.5 ಕಿ. ಮೀ. ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಮುಳ್ಳು ಗಿಡ ಗಂಟಿಗಳನ್ನು ಅಧಿಕಾರಿಗಳು ಜೆಸಿಬಿ ಸಹಾಯದಿಂದ ತೆರವುಗೊಳಿಸಿದರು.

ಈ ಸಂದರ್ಭ ಮಾತನಾಡಿದ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಂಕರನಾಯಕ, ಕಳೆದ ಮೂರು ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿಯಿಂದ ರಸ್ತೆ ನಿರ್ಮಿಸಲಾಗಿತ್ತು. ಎರಡೂ ಬದಿಗಳಲ್ಲಿ ಮುಳ್ಳು ಗಿಡಗಳು ಬೆಳೆದು ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ಇಲಾಖೆಗೆ ಮನವಿ ಮಾಡಿದ್ದರೂ ಫಲ ನೀಡಿರಲಿಲ್ಲ. ಇದೀಗ ಪ್ರತಿಭಟನೆ ಮಾಡಲು ಮುಂದಾದಾಗ ಕ್ರಮ ವಹಿಸಲಾಗಿದೆ ಎಂದರು. ಗಿಡಗಳು ಬೆಳೆದ ಕಾರಣ ರಸ್ತೆ ತಿರುವುಗಳಲ್ಲಿ ವಾಹನ ಸವಾರರಿಗೆ ಅಡಚಣೆಯಾಗಿ ಹಲವು ಬಾರಿ ಅಪಘಾತ ಪ್ರಕರಣಗಳು ನಡೆದಿದ್ದವು. ಈ ಬಗ್ಗೆ ಅಧಿಕಾರಿಗಳಿಗೂ ತಿಳಿಸಲಾಗಿತ್ತು. ಅವರು ತೆರವುಕಾರ್ಯಾಚರಣೆ ಮಾಡಿರುವುದು ರೈತ ಸಂಘಟನೆಗೆ ಸಂದ ಜಯ ಎಂದು ತಿಳಿಸಿದರು. ಹೆಡತಲೆ ಗ್ರಾಮದ ರೈತ ಸಂಘ ಘಟಕದ ಅಧ್ಯಕ್ಷ ಮಹದೇವನಾಯಕ, ಉಪಾಧ್ಯಕ್ಷ ಮಹದೇವ ನಾಯಕ , ಗ್ರಾಮ ಪಂಚಾಯಿತಿ ಸದಸ್ಯರಾದ ಮಣಿಕಂಠ, ರಂಗಸ್ವಾಮಿ. ಪುಟ್ಟ ನಾಯಕ, ಶ್ರೀನಿವಾಸ ಗೋವಿಂದ, ನಾಗರಾಜು, ರಂಗರಾಜು ರಘು ಹಾಗೂ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net