ದೇವರಸನಹಳ್ಳಿ ಗ್ರಾಪಂ- ಸೌಭಾಗ್ಯಾ ಅವಿರೋಧ ಆಯ್ಕೆ

Oplus_131072
Oplus_131072
Published on

ನಂಜನಗೂಡು : ತಾಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿ ಸೌಭಾಗ್ಯಾ ಅವಿರೋಧ ಆಯ್ಕೆಯಾದರು. ಅಧ್ಯಕ್ಷ ಸುಮತಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಸೌಭಾಗ್ಯಾ ಒಬ್ಬರೇ ನಾಮಪತ್ರವನ್ನು ಸಲ್ಲಿಸಿದ ಕಾರಣ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು. ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ, ಶಿಲ್ಪಾ ಚುನಾವಣಾ ಅಧಿಕಾರಿಯಾಗಿದ್ದರು. ಸುಮಾರು 23 ಸದಸ್ಯರ ಬಲ ಹೊಂದಿರುವ ದೇವರಸನಹಳ್ಳಿ ಗ್ರಾಪಂನಲ್ಲಿ ಚುನಾವಣೆ ಸಂದರ್ಭ ಮೂವರು ಸದಸ್ಯರು ಗೈರಾಗಿದ್ದರು.

ಭರವಸೆ: ಗೆಲುವಿನ ಸಂಭ್ರಮಾಚರಣೆ ಸಂದರ್ಭ ಮಾತನಾಡಿದ ಅಧ್ಯಕ್ಷೆ ಸೌಭಾಗ್ಯಾ, ಮುಂದಿನ 10 ತಿಂಗಳ ಕಾಲ ಉತ್ತಮ ಆಡಳಿತ ನೀಡಿ, ನಮ್ಮ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಮುಂದಾಗುತ್ತೇನೆ ಎಂದರು. ಜನರಿಗೆ ವಿವಿಧ ರೀತಿಯ ಮೂಲ ಸೌಲಭ್ಯ ಕಲ್ಪಿಸುವುದರೊಂದಿಗೆ ಇದನ್ನು ಮಾದರಿ ಗ್ರಾಪಂ ಮಾಡುವೆ ಎಂದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೈತ್ರಾ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಮ್ಮರಗಾಲ ಸೋಮಣ್ಣ, ಗ್ರಾಪಂ ಸದಸ್ಯರಾದ ನಾಗರಾಜು, ರಾಜು, ಮಹದೇವಯ್ಯ, ಮಹದೇವಸ್ವಾಮಿ, ಕಾಳಪ್ಪ, ಮೂಗ ಶೆಟ್ಟಿ, ಸುರೇಶ, ಮಂಟೇಲಿಂಗ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net