

ಕೊಪ್ಪ: ಭಾರತದ ಪ್ರಸಿದ್ಧ ಪ್ರಥಮ ಹೈಬ್ರಿಡ್ ಕಾಳು ಮೆಣಸಿನ ತಳಿಗಳಲ್ಲಿ ಒಂದಾದ ಣಿಯೂರು ತಿಳಿ ಕಾಳುಮೆಣಸು ಎಂಟು ದೇಶಗಳಲ್ಲಿ ಜನಪ್ರಿಯವಾಗಿದ್ದು, ಉತ್ತಮ ಇಳುವರಿ ನೀಡುತ್ತಿದೆ ಎಂದು ಕೇರಳ ಕಣ್ಣೂರಿನ ಕಾಳುಮೆಣಸು ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಎಚ್.ಎಲ್.ವಿಕ್ರಮ್ ಹೇಳಿದರು.
ಇಂಡಿಯನ್ ಪೆಪ್ಪರ್ ಲೀಗ್(ಐಪಿಎಲ್) ಕುದುರೆಗುಂಡಿ ಸಮೀಪದ ಯಡೆಗೆರೆ ಸುಬ್ರಹ್ಮಣ್ಯ ಅವರ ಕೃಷಿ ತೋಟದಲ್ಲಿ ಆಯೋಜಿಸಿದ್ದ ಕೃಷಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಣಿಯೂರು1 ಮಾದರಿ ಹೆಚ್ಚು ಇಳುವರಿ ನೀಡುವ ತಳಿಯಾಗಿದೆ. ಒಂದು ಮರದಿಂದ ಗರಿಷ್ಟ 25 ಕಿಲೋ ಒಣ ಕಾಳುಮೆಣಸು ಪಡೆದ ಉದಾಹರಣೆ ಇದೆ. ಣಿಯೂರು 5 ಮಾದರಿ ತಳಿ ಅಡಕೆ, ತೆಂಗು ತೋಟಕ್ಕೆ ಸೂಕ್ತ. ಕರಿಮುಂಡ ತಳಿಗೆ ರೋಗ ಜಾಸ್ತಿ ಆದರೆ ಕಾಳುಮೆಣಸಿನ ಗಾತ್ರ ದೊಡ್ಡದು. ಅಡಕೆ, ತೆಂಗಿನ ಮರಗಳಿಗೆ ಎರಡು ಬಳ್ಳಿಗಳನ್ನು ನೆಡುವುದು ಸೂಕ್ತ. ಸಿಲ್ವರ್ ಮರಗಳಿಗೆ ಮೂರು ಗಿಡಗಳನ್ನು ನಾಟಿ ಮಾಡಬಹುದು ಎಂದರು.
ತಾಂತ್ರಿಕ ಸಲಹೆಗಾರ ಸುನೀಲ್ ತಾಮಗಾಳೆ ಮಾತನಾಡಿ, ಮಳೆ ಪ್ರಮಾಣ ಜಾಸ್ತಿಯಾದಂತೆ ಕಾಳುಮೆಣಸಿಗೆ ರೋಗಗಳ ಪ್ರಮಾಣವೂ ಜಾಸ್ತಿಯಾಗುತ್ತದೆ. ರೋಗ ರಹಿತವಾಗಿ ಮಾಡಲು ಂಗಿಸೈಡ್ ಬಳಕೆ ಅಗತ್ಯ. ಒಂದು ಡ್ರಮ್ ನೀರಿಗೆ ಎರಡು ಕಿಲೋ ಮೈಲು ತುತ್ತ ಹಾಗೂ 2 ಕಿಲೋ ಸುಣ್ಣವನ್ನು ಹಾಕಿ ಬೋರ್ಡೋ ದ್ರಾವಣ ಸಿದ್ದಪಡಿಸಬೇಕು ಹೀಗೆ ಸಿದ್ದಪಡಿಸಿದ ದ್ರಾವಣವನ್ನು ಅರ್ಧ ಗಂಟೆ ಬಿಟ್ಟು ತೋಟಕ್ಕೆ ಸಿಂಪಡಣೆ ಮಾಡಬೇಕು. ಮಿಶ್ರಣ ತಯಾರಿಸಿದ ಮೂರು ಗಂಟೆಯ ಒಳಗೆ ಸಿಂಪಡಣೆ ಮಾಡಬೇಕು. ವಾತಾವರಣ ನೋಡಿ ಔಷಧ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.