

ಚಿತ್ರದುರ್ಗ: ಮುರುಘರಾಜೇಂದ್ರ ಬೃಹನ್ಮಠದಿಂದ ‘ನಿತ್ಯಕಲ್ಯಾಣ’ ಶ್ರಾವಣಮಾಸದ ವಿಶೇಷ ಚಿಂತನಾ ಕಾರ‌್ಯಕ್ರಮವನ್ನು ಆ.17ರಿಂದ ಸೆಪ್ಟೆಂಬರ್ 15ರವರೆಗೆ ಚಿತ್ರದುರ್ಗ ಸಹಿತ ರಾಜ್ಯದ ವಿವಿಧೆಡೆ ಏರ್ಪಡಿಸಲಾಗಿದೆ.
ದಾವಣಗೆರೆ, ಚನ್ನಗಿರಿ, ಮಾವಿನಹಳ್ಳಿ, ಬೆಂಗಳೂರು, ಮೈಸೂರು, ಕೊಡಗಿನ ಬೇಳೂರು ಮಠ, ವಿಜಯಮಹಾಂತೇಶ್ವರ ಮಠ, ಇಳಕಲ್ ಇತರ ಸ್ಥಳದಲ್ಲಿ ಆಯೋಜಿಸಲಾಗಿದೆ.
17ರ ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗ ವಿದ್ಯಾನಗರದ ಶಾಸಕರ ಕಚೇರಿಯಲ್ಲಿ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ. ಶ್ರೀ ಬಸವಪ್ರಭು ಸ್ವಾಮೀಜಿ ನೇತೃತ್ವ ವಹಿಸಲಿದ್ದು, ಛಲವಾದಿ ಗುರುಪೀಠದ ಶ್ರೀ ಬಸವನಾಗೀದೇವ ಸ್ವಾಮೀಜಿ ಸಮ್ಮುಖ ವಹಿಸುವರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಇತರರು ಪಾಲ್ಗೊಳ್ಳುವರು. ‘ಪರಮಾರ್ಥದೃಷ್ಟಿ’ ವಿಷಯ ಕುರಿತು ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಮಾತನಾಡುವರು.