

ಮುನವಳ್ಳಿ: ಪಟ್ಟಣದ ಎಂ.ಎಲ್.ಇ.ಎಸ್. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಜೆಂಟ್ಸ್ ಗ್ರೂಪ್ ಆ್ ರಾಣಿ ಚನ್ನಮ್ಮ ಸಹೇಲಿ ಸಹಯೋಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು.
ನಿವತ್ತ ಮುಖ್ಯಾಧ್ಯಾಪಕ ಎ.ಪಿ.ಲಂಬೂನವರ ಉದ್ಘಾಟಿಸಿದರು. ರಾಣಿ ಚನ್ನಮ್ಮ ಸಹೇಲಿ ಅಧ್ಯೆ ವಿದ್ಯಾ ಬಾಳಿ ಅಧ್ಯತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸವಿತಾ ಬಾಳಿ, ಸುಮಾ ರೇಣಕೆ, ನಿರ್ಮಲಾ ಗದ್ವಾಲ್, ರಾಜೇಶ್ವರಿ ಬಾಳಿ, ಅಶ್ವಿನಿ ಬಾಳಿ, ಮಧುಮತಿ ಕಲಾಲ, ರೇಖಾ ಬಾಳಿ, ಸವಿತಾ ಹಂಜಿ, ಮುಖ್ಯಾಧ್ಯಾಪಕ ಎ.ವಿ. ರೋಣದ, ಎ.ವಿ. ನರಗುಂದ, ಎಂ.ಎಸ್.ಬಾನಿ, ರಾಜಶೇಖರ ಮಲ್ಲಾಪೂರಮಠ, ಬಸವರಾಜ ಬಂಡಿ ಇತರರಿದ್ದರು. ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಜ್ಞಾನಿಗಳ ವೇಷ ಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.