ಜಿಲ್ಲೆಗೆ ನಿಟ್ಟೂರು ಸಹಕಾರ ಸಂಘ ಪ್ರಥಮ

FotoJet 23 23
Published on

ಡಿಸಿಸಿ ಬ್ಯಾಂಕ್ ನಿರ್ದೇಶಕ ಪ್ರಭಾಕರ್ ಸಂತಸ

ಗುಬ್ಬಿ:ಜಿಲ್ಲೆಯಲ್ಲಿಯೇ ನಿಟ್ಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮೊದಲ ಸ್ಥಾನದಲ್ಲಿರುವುದು ಅತ್ಯಂತ ಖುಷಿ ಕೊಡುವ ವಿಚಾರ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ, ನಿಟ್ಟೂರು ಸಂಘ ಅಧ್ಯಕ್ಷ ಎಚ್.ಸಿ.ಪ್ರಭಾಕರ್ ಸಂತಸ ವ್ಯಕ್ತಪಡಿಸಿದರು.

ತಾಲೂಕಿನ ನಿಟ್ಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಭೆಯಲ್ಲಿ ವಾತನಾಡಿ, ಸುವಾರು 4 ಸಾವಿರಕ್ಕೂ ಹೆಚ್ಚು ಸದಸ್ಯರು ನಮ್ಮ ಸಂದಲ್ಲಿದ್ದು, ಸಂದ ಸದಸ್ಯರಿಗೆ ಅವಶ್ಯಕತೆ ಇರುವಂತಹ ಮತ್ತು ಅವರ ಅನುಕೂಲಕ್ಕೆ ತಕ್ಕಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ನಿರಂತರವಾಗಿ ನೀಡುತ್ತಾ ಬಂದಿದ್ದೇವೆ. ಈ ವರ್ಷ ಸುವಾರು 25 ಲಕ್ಷ ರೂ. ಲಾಭಗಳಿಸಿದ್ದು, ಜಿಲ್ಲೆಯಲ್ಲಿ ಉತ್ತಮವಾಗಿ ನಿಟ್ಟೂರು ಸಹಕಾರ ಸಂ ಕಾರ್ಯನಿರ್ವಹಿಸುತ್ತಿದೆ ಎಂದರು.

ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ವಾರ್ಗದರ್ಶನದಲ್ಲಿ ಸದಸ್ಯರಿಗೆ ಹೆಚ್ಚಿನ ರೀತಿಯ ಸಾಲ ಸೌಲಭ್ಯ ನೀಡಲಾಗುತ್ತಿದೆ. ನಾನು ಸಹ ನಿರ್ದೇಶಕನಾಗಿರುವುದರಿಂದ ತಾಲೂಕಿಗೆ ಹಾಗೂ ನಿಟ್ಟೂರು ಸಹಕಾರ ಸಂದ ಬೆಳವಣಿಗೆಗೆ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿ, ರೈತರಿಗೆ ಅನುಕೂಲ ವಾಗುವಂತಹ ಎಲ್ಲ ಸೌಲಭ್ಯಗಳನ್ನು ನೀಡುವುದಕ್ಕೆ ಬದ್ಧವಾಗಿದ್ದೇನೆ ಎಂದು ತಿಳಿಸಿದರು.

ನಿರ್ದೇಶಕ ವಸಂತಕುವಾರ್ ವಾತನಾಡಿ, ಅಧ್ಯಕ್ಷರು, ನಿರ್ದೇಶಕರು ಮತ್ತು ಸರ್ವ ಸದಸ್ಯರು ಸಹ ಒಂದೇ ಮನೆಯಂತೆ ಒಟ್ಟಾಗಿ ಸಹಕಾರ ಸಂದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ. ಮುಂದಿನ ದಿನದಲ್ಲಿ ಮತ್ತಷ್ಟು ಹೊಸ ಯೋಜನೆಗಳನ್ನು ಜಾರಿಗೆ ತರುವಂತಹ ಎಲ್ಲ ತಯಾರಿ ವಾಡುತ್ತಿದ್ದೇವೆ ಎಂದು ತಿಳಿಸಿದರು.

ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಶಾಂತಮ್ಮ, ಎನ್.ಸಿ.ಕನ್ನಿಗಯ್ಯ, ಎನ್.ಎಂ.ರಮೇಶ್, ಶಿವರಾಂ, ಎನ್.ಎಸ್.ಸಿದ್ದಗಂಗಯ್ಯ, ಎನ್.ಎಸ್. ಬಸವರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net