

ಮಂಗಳೂರು: ಸುರತ್ಕಲ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿ ಕರ್ನಾಟಕ ಇದರ 20 ನೇ ಘಟಿಕೋತ್ಸವದ ಸಂದರ್ಭದಲ್ಲಿ ಶನಿವಾರ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರ ಸಂಶೋಧನಾ ಸೌಲಭ್ಯ ಹಾಗೂ ಸ್ಕೂಲ್ ಆಫ್ ಇಂಟರ್ ಡಿಸಿಪ್ಲಿನರಿ ಸ್ಟಡೀಸ್ ಕಟ್ಟಡಗಳನ್ನು ಉದ್ಘಾಟಿಸಿದರು.
48 ಕೋಟಿ ರೂ. ವೆಚ್ಚದಲ್ಲಿ 10,394 ಚದರ ಮೀಟರ್ ವಿಸ್ತೀರ್ಣದಲ್ಲಿ “ಕೇಂದ್ರೀಯ ಸಂಶೋಧನಾ ಸೌಲಭ್ಯ ಮತ್ತು ಸ್ಕೂಲ್ ಆಫ್ ಇಂಟರ್ ಡಿಸಿಪ್ಲಿನರಿ ಸ್ಟಡೀಸ್ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. 54.76 ಕೋಟಿ ರೂ. ವೆಚ್ಚದ 11246 ಚದರ ಮೀಟರ್ ವಿಸ್ತೀರ್ಣದ ಲೆಕ್ಚರ್ ಹಾಲ್ ಕಾಂಪ್ಲೆಕ್ಸ್ - ಬ್ಲಾಕ್ -ಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಎನ್‌ಐಟಿಕೆ ಸುರತ್ಕಲ್ ಎನ್‌ಐಟಿಗಳಲ್ಲಿ ಹೆಚ್‌ಎಎಫ್‌ಎಯ ಹಣಕಾಸುಗಳನ್ನು ಸಿಆರ್‌ಎಫ್ ಸ್ಥಾಪಿಸಲು ಬಳಸಿದ ಮೊದಲನೆಯ ಸಂಸ್ಥೆಯಾಗಿದೆ. ಭಾರತ ಸರ್ಕಾರದ ಉನ್ನತ ಶಿಕ್ಷಣ ಹಣಕಾಸು ಸಂಸ್ಥೆ (HEFA) ಯಿಂದ 80 ಕೋಟಿ ಆರ್ಥಿಕ ನೆರವಿನೊಂದಿಗೆ, ಕೇಂದ್ರೀಯ ಸಂಶೋಧನಾ ಫೆಸಿಲಿಟಿ NITK ಅನ್ನು ಸ್ಥಾಪಿಸಲಾಗಿದೆ.
ಈ ಸಂದರ್ಭದಲ್ಲಿ ಸಂಸದ, ಶಾಸಕ ಡಾ.ವೈ.ಭರತ್ ಶೆಟ್ಟಿ, ಸಂಸ್ಥೆಯ ಪ್ರಭಾರ ನಿರ್ದೇಶಕ ಪ್ರೊ.ಜಿ.ಸಿ.ಮೋಹನ್ ಕುಮಾರ್ ಮೊದಲಾದವರಿದ್ದರು.