ಎನ್‌ಐಟಿಕೆ ಆಡಳಿತ ಮಂಡಳಿಗೆ ಕೆ.ಅಜಿತ್ ಕುಮಾರ್ ರೈ ನೇಮಕ

mng-8nov-ajithkumar rai
Published on


ಮಗಳೂರು : ಎನ್‌ಐಟಿಕೆ ಸುರತ್ಕಲ್ ಇದರ ಆಡಳಿತ ಮಂಡಳಿಗೆ ಉದ್ಯಮಿ ಕೆ.ಅಜಿತ್ ಕುಮಾರ್ ರೈ ಇವರು ರಾಜ್ಯ ಸರ್ಕಾರದ
ಪ್ರತಿನಿಧಿಯಾಗಿ ನಾಮ ನಿರ್ದೇಶನಗೊಂಡಿದ್ದಾರೆ. ಮೈಸೂರು ವಿ.ವಿ.ಯಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಹಾಗೂ ಕೆನಡಾದ ಡಾಲ್‌ಹೌಸಿ ವಿಶ್ವವಿದ್ಯಾಲಯದಲ್ಲಿ ಕೈಗಾರಿಕಾ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸುಪ್ರಜಿತ್ ಗ್ರೂಪ್ ಆಪ್ ಕಂಪನಿಯು ಸಂಸ್ಥಾಪಕರಾಗಿದ್ದಾರೆ. ಕೈಗಾರಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಇವರು ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಮ್ಯಾನೇಜ್ಮೆಂಟ್, ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಇಂಜಿನಿಯರ್ಸ್ ಮುಂತಾದ ಕೈಗಾರಿಕಾ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net