ಚುನಾವಣೆ ಸಿಬ್ಬಂದಿ ಜತೆ ಊಟ ಸವಿದ ನಿತೇಶ ಪಾಟೀಲ

IMG-20230509-WA0016.jpg
Published on

ಬೆಳಗಾವಿ; ಹುಕ್ಕೇರಿಯ ಶ್ರೀ ಕಾಡಸಿದ್ಧೇಶ್ವರ ಪಬ್ಲಿಕ್ ಶಾಲೆಯ ಆವರಣದಲ್ಲಿರುವಮಸ್ಟರಿಂಗ್ ಕೇಂದ್ರದ‌ ಆವರಣಕ್ಕೆ ಭೇಟಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಭೇಟಿ ನೀಡಿದರು. ಈ ವೇಳೆ ಚುನಾವಣೆ ಸಿಬ್ಬಂದಿಗಾಗಿ ಆಯೋಜಿಸಿದ ಊಟದ ಕೌಂಟರ್ ಗೆ ಭೇಟಿ ಗುಣಮಟ್ಟ ಪರಿಶೀಲಿಸಿದರು. ಅಲ್ಲದೆ ನಿತೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ ಅವರು ಚುನಾವಣಾ ಸಿಬ್ಬಂದಿ ಜತೆ ಊಟ ಮಾಡಿದರು. ಯಮಕನಮರಡಿ ಚುನಾವಣಾಧಿಕಾರಿ ಬಲರಾಮ್ ಚವಾಣ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net