ಅಬಕಾರಿ ಸಚಿವ ಎಚ್​. ನಾಗೇಶ್​ಗೆ ಸಿಎಂ ಬಿಎಸ್​ವೈ ಶಾಕ್​!

H Nagesh
Published on

ಬೆಂಗಳೂರು: ಅಬಕಾರಿ ಸಚಿವ ಎಚ್​. ನಾಗೇಶ್ ಅವರ ನಿರ್ಧಾರಕ್ಕೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಬ್ರೇಕ್​ ಹಾಕಿದ್ದಾರೆ.

ಅಬಕಾರಿ ಇಲಾಖೆಯ ಪುನಾರಚನೆ ಹಾಗು ಸಿಬ್ಬಂದಿ ವರ್ಗಾವಣೆಯ ನಿರ್ಧಾರಕ್ಕೆ ಸಿಎಂ ಬಿಎಸ್​ವೈ ತಡೆ ನೀಡಿದ್ದಾರೆ. ಸಚಿವ ನಾಗೇಶ್ ನಿರ್ಧಾರದ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಹಣದ ವ್ಯವಹಾರ ಹಾಗೂ ಭಾರಿ ಲಾಬಿಯ ಶಂಕೆ ಇರುವ ಹಿನ್ನಲೆಯಲ್ಲಿ ಸಿಎಂ ಬ್ರೇಕ್ ಹಾಕಿದ್ದಾರೆಂದು ತಿಳಿದುಬಂದಿದೆ.

ಎ, ಬಿ, ಸಿ ವರ್ಗ ಸೇರಿದಂತೆ 200ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿಯನ್ನು ವರ್ಗಾವಣೆಗೊಳಿಸಲು ನಾಗೇಶ್ ಆದೇಶ ಮಾಡಿದ್ದರು. ಇದೀಗ ಈ ಆದೇಶವನ್ನು ತಡೆ ಹಿಡಿಯುವಂತೆ ಸಿಎಂ ಸೂಚನೆ ನೀಡಿದ್ದಾರೆ.

ಇಲಾಖೆಯನ್ನು ಪುನಾರಚನೆಗೊಳಿಸಿದರೆ ಹೊಸ ಹುದ್ದೆ ಸೃಷ್ಟಿಸ ಬೇಕಾಗುತ್ತದೆ. ಇದರಿಂದ ಆರ್ಥಿಕವಾಗಿಯೂ ಹೊರೆ ಬೀಳಲಿದೆ ಎಂದು ಸಚಿವ ನಾಗೇಶ್​ ಅವರ ಆದೇಶಕ್ಕೆ ಸಿಎಂ ಅಲ್ಪವಿರಾಮ ಇಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net