

ಮಂಗಳೂರು: ಭಾರತದಲ್ಲಿ ಹೊಸ ಕಾರುಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ನಿಸ್ಸಾನ್ ಕಾರುಗಳು ಮತ್ತೆ ಮಂಗಳೂರಿಗೆ ಆಗಮಿಸುತ್ತಿರುವುದು ಸಂತಸ ತಂದಿದೆ. ನಿಸ್ಸಾನ್ ಕಾರುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯವನ್ನು ಪಡೆದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ ಎಂದು ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈ.ಲಿನ ಎಂಡಿ ಸೌರಬ್ ವತ್ಸ ಹೇಳಿದರು.
ಬುಧವಾರ ಮಂಗಳೂರಿನ ಕೊಟ್ಟಾರ ಚೌಕಿ ಪೈ ಚೇಂಬರ್ಸ್‌ನಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈ.ಲಿನ ಹೊಸ ಡೀಲರ್‌ಶಿಪ್ ‘ಪೈ ಸೇಲ್ಸ್ ನಿಸ್ಸಾನ್’ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು.
ಮುಂದಿನ 30 ತಿಂಗಳಲ್ಲಿ ನಿಸ್ಸಾನ್ ತನ್ನ 5 ಹೊಸ ಮಾಧರಿಯ ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಇತರ ಕಂಪನಿಗಳಿಗೆ ಹೋಲಿಸಿದರೆ ನಿಸ್ಸಾನ್ ವಾಹನಗಳು ಹೆಚ್ಚು ವೇಗವಾಗಿ ಮಾರುಕಟ್ಟೆಗೆ ಬಿಡುಗಡೆಗೊಳ್ಳುತ್ತಿದೆ. ಭಾರತದಲ್ಲಿ ಹೊಸ ಕಾರುಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ನಿಸ್ಸಾನ್ ಇಂಡಿಯಾ ಕಂಪನಿಯ ಹೊಸ ಕಾರು ಹಲವಾರು ತಂತ್ರಜ್ಞಾನ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ ಎಂದರು.
ಮಂಗಳೂರು ಸಾರಿಗೆ ಇಲಾಖೆಯ ಹಿರಿಯ ಆರ್‌ಟಿಓ ಹಾಗೂ ಡಿಸಿಟಿ ಶ್ರೀಧರ್ ಕೆ. ಮಲಾಡ್ ಮಾತನಾಡಿ, ‘ಪೈ ಸೇಲ್ಸ್ ನಿಸ್ಸಾನ್’ ಸಂಸ್ಥೆಯಿಂದ ನಿಸ್ಸಾನ್ ಕಾರುಗಳು ಹೆಚ್ಚಾಗಿ ಗ್ರಾಹಕರನ್ನು ತಲುಪಲಿ, ಈ ಮೂಲಕ ಸಾರಿಗೆ ಇಲಾಖೆಗೂ ಹೆಚ್ಚು ಆದಾಯದ ಅನುಕೂಲವಾಗುವಂತಾಗಲಿ. ಇಂದು ಸಂಸ್ಥೆ ಗ್ರಾಹಕ ಸ್ನೇಹಿಯಾದಾಗ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯ, ಈ ನಿಟ್ಟಿನಲ್ಲಿ ಪೈ ಸೇಲ್ಸ್ ನಿಸ್ಸಾನ್’ ಸಂಸ್ಥೆಗೆ ಶುಭವಾಗಲಿ ಎಂದರು.
ನಿಸ್ಸಾನ್ ಗ್ರಾಹಕರಾದ ಶಾಲಿನಿ ಸುರೇಶ್ ಕಾಮತ್, ಶ್ರೀಧರ್ ಕಾಮತ್, ಸಂಧ್ಯಾ ಸುಜೀರ್ ನಾಯಕ್, ರಂಗ ಪೈ, ಅನಿಷಾ ಮೊಂತೆರೊ ಅವರಿಗೆ ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈ.ಲಿನ ಎಂಡಿ ಸೌರಬ್ ವತ್ಸ ನೂತನ ಕಾರು ಕೀ ಹಸ್ತಾಂತರಿಸಿ ಶುಭಹಾರೈಸಿದರು.
ಪೈ ಸೇಲ್ಸ್ ನಿಸ್ಸಾನ್ ಇದರ ಎಂಡಿ ಹಾಗೂ ಪಾಲುದಾರರಾದ ಟಿ. ಗಣಪತಿ ಪೈ, ಟಿ ರತ್ನಾಕರ ಪೈ, ಟಿ. ಅರುಣ್ ಪೈ, ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕರಾದ ಸುರೇಖ, ನಿಸ್ಸಾನ್ ಮೋಟಾರ್ ಇಂಡಿಯಾ ಪೈ.ಲಿನ ಹೆಡ್ ಆಫ್ ಸರ್ವೀಸ್ ರಾಹುಲ್, ನಿಸ್ಸಾನ್ ಟೀಮ್‌ನ ಚಂದನ್, ಆನಂದ್, ಅಜೇಯ್, ಶಿವಂ ಸಹಿತ ಹಲವರು ಇದ್ದರು.
ಪೈ ಸೇಲ್ಸ್ ನಿಸ್ಸಾನ್ ಇದರ ಎಂಡಿ ಹಾಗೂ ಪಾಲುದಾರ ಅರುಣ್ ಪೈ ವಂದಿಸಿದರು. ಪ್ರೆಸ್ಟೆನ್ ಆರ್ ಸಿಕ್ವೇರಾ ಕಾರ್ಯಕ್ರಮ ನಿರೂಪಿಸಿದರು.
----------------
ಪೈ ಸೇಲ್ಸ್ ನಿಸ್ಸಾನ್ ಶುಭಾರಂಭ
ಮಂಗಳೂರಿನ ಕೊಟ್ಟಾರ ಚೌಕಿ ಪೈ ಚೇಂಬರ್ಸ್‌ನಲ್ಲಿ ನಿಸ್ಸಾನ್ ಮೋಟಾರ್ ಇಂಡಿಯಾ ಪೈ.ಲಿನ ಹೊಸ ಡೀಲರ್‌ಶಿಪ್ ‘ಪೈ ಸೇಲ್ಸ್ ನಿಸ್ಸಾನ್’ ಸಂಸ್ಥೆ ಶುಭಾರಂಭಗೊಂಡಿದ್ದು, ಭಾರತದಲ್ಲಿ ಹೊಸ ಕಾರುಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ನಿಸ್ಸಾನ್ ಕಾರುಗಳು ಇಲ್ಲಿ ಲಭ್ಯ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಇಲ್ಲಿನ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದು, ಆಸಕ್ತರು ಪೈ ಸೇಲ್ಸ್ ನಿಸ್ಸಾನ್ ಸಂಸ್ಥೆಗೆ ಬೇಟಿ ನೀಡಿ ತಮ್ಮ ಇಷ್ಟದ ನಿಸ್ಸಾನ್ ಕಾರುಗಳನ್ನು ಬುಕ್ಕಿಂಗ್ ಮಾಡಿಕೊಳ್ಳಲು ಅವಕಾಶ ಇದೆ.