ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳು ಪ್ರಬಲ

udp-8-nirman
Published on

 ಉಡುಪಿ: ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳು ಪ್ರಬಲವಾಗಿದ್ದು, ರಾಷ್ಟ್ರೀಕೃತ ಬ್ಯಾಂಕ್​ಗಳಿಂತಲೂ ಹೆಚ್ಚಿನ ಠೇವಣಿ ಹೊಂದಿವೆ. ಉದ್ಯಮಿಗಳಿಗೆ ಕೋಟ್ಯಾಂತರ ರೂ. ಸಾಲ ನೀಡುವ ಶಕ್ತಿ ಪಡೆದಿದ್ದು, ಜನರ ವಿಶ್ವಾಸ ಉಳಿಸಿಕೊಂಡಿದ್ದಾರೆ ಎಂದು ರಾಜಾಪುರ ಸಾರಸ್ವತ ಸಂದ ಅಧ್ಯಕ್ಷ ರವೀಂದ್ರ ಪ್ರಭು ಕಳಾರಿ ಹೇಳಿದರು.

ಆತ್ರಾಡಿ ಶಾಂಭವಿ ಕಟ್ಟಡದ ನೆಲ ಅಂತಸ್ತಿನಲ್ಲಿ ನಿರ್ಮಾಣ್​ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂದ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ನಾಗಪಾತ್ರಿ ರಾಮಚಂದ್ರ ಕುಂಜಿತ್ತಾಯ ಉದ್ಘಾಟಿಸಿ, ವಿಶ್ವಾಸದ ಮೇಲೆ ಸಹಕಾರಿ ತತ್ವ ನಿಂತಿದೆ. ಸಂಸ್ಥೆಯ ಅಭಿವೃದ್ಧಿಯಲ್ಲಿ ಅನೇಕರ ಪರಿಶ್ರಮವಿದ್ದು, ಜನರ ಸಹಕಾರವೂ ಅಗತ್ಯವಾಗಿದೆ. ಬೆಳೆಯುತ್ತಿರುವ ಪಟ್ಟಣ ಆತ್ರಾಡಿಯಲ್ಲಿ ಸಹಕಾರಿ ಸಂ ಪ್ರಾರಂಭಿಸಿರುವುದರಿಂದ ಸಮಾಜಕ್ಕೆ ಬಹಳಷ್ಟು ಅನುಕೂಲವಾಗಲಿದೆ ಎಂದರು.

ಸಂಸ್ಥೆ ಉಪಾಧ್ಯಕ್ಷ ಮಧುಸೂದನ್​ ನಾಯಕ್​ ಭೈರಂಜೆ ಪ್ರಾಸ್ತಾವಿಕವಾಗಿ ಮಾತನಾಡಿ, 2011ರಲ್ಲಿ ಪ್ರಾರಂಭವಾದ ಸಹಕಾರಿ ಸಂಸ್ಥೆ ಪ್ರಸ್ತುತ 3 ಶಾಖೆಗಳನ್ನು ಹೊಂದಿದ್ದು, 3 ಸಾವಿರ ಮಂದಿ ಸದಸ್ಯರಿದ್ದಾರೆ. 22 ಕೋಟಿ ರೂ. ದುಡಿಯುವ ಬಂಡವಾಳ ಮತ್ತು 17 ಕೋಟಿ ರೂ. ಮುಂಗಡ ಸಾಲ ವಿತರಿಸಿದೆ. ಹಿರಿಯಡ್ಕದಲ್ಲಿ ಸ್ವಂತ ಕಟ್ಟಡ ಸೇರಿದಂತೆ ಒಟ್ಟು 26 ಕೋಟಿ ರೂ. ಆಸ್ತಿಮೌಲ್ಯ ಹೊಂದಿದೆ ಎಂದು ತಿಳಿಸಿದರು.

ಸಂದ ಅಧ್ಯಕ್ಷ ನಿತ್ಯಾನಂದ ನಾಯಕ್​ ಮಂಚಿ ಅಧ್ಯಕ್ಷತೆ ವಹಿದ್ದರು. ಮುಖ್ಯ ಅತಿಥಿಗಳಾಗಿ ಆತ್ರಾಡಿ ಗ್ರಾಪಂ ಅಧ್ಯಕ್ಷ ಹರೀಶ್​ ಶೆಟ್ಟಿ, ರಾಜ್ಯ ಸೌಹಾರ್ದ ಸಹಕಾರಿ ಸಂದ ನಿರ್ದೇಶಕ ಮಂಜುನಾಥ ಎಸ್​.ಕೆ., ಜಿಪಂ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್​, ಉದ್ಯಮಿ ದಿಲೀಪ್​ ರಾಜ್​ ಹೆಗ್ಡೆ, ನಿವೃತ್ತ ಆಧಾಯ ತೆರಿಗೆ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ ಪ್ರಭು, ಉದ್ಯಮಿ ಅಪು$್ಪ ಮರಕಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರದಿಪ ಕೊಂಕೋಡು, ನಿರ್ದೇಶಕರು ಉಪಸ್ಥಿತರಿದ್ದರು. ಸತ್ಯಾನಂದ ನಾಯಕ್​ ಸ್ವಾಗತಿಸಿ, ದಿನೇಶ್​ ಪ್ರಭು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net