ಬಡತನ ರೇಖೆಯಿಂದ ದೇಶದ 25 ಕೋಟಿ ಜನರು ಹೊರಬಂದಿದ್ದಾರೆ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​

Nirmala Seetharaman
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ 25 ಕೋಟಿ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.

ಭಾರತೀಯ ಚಾರ್ಟರ್ಡ್ ಅಕೌಂಟೆಂಟ್​ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿಯ ಬೆಂಗಳೂರು ಶಾಖೆಯಲ್ಲಿ ಮಂಗಳವಾರ ಆಯೋಜಿಸಿದ್ದ 2047ರ ದೇಶದ ಆರ್ಥಿಕ ಗುರಿ ಕುರಿತು ಲೆಕ್ಕಪರಿಶೋಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹಣಕಾಸು ಸ್ಥಿತಿಯಿಂದ ಬಡತನ ಅಳೆಯಲು ಸಾಧ್ಯವಿಲ್ಲ. ಉದ್ಯೋಗ, ಆರೋಗ್ಯ, ಸಾರಿಗೆ, ಅಡುಗೆ ಅನಿಲ, ನೀರು, ವಸತಿ ಸೌಲಭ್ಯ, ಶಿಣ ಇತ್ಯಾದಿಗಳ ತುಲನೆಯೊಂದಿಗೆ ಬಡತನ ಅಳೆಯಲಾಗುತ್ತದೆ. ಈ ಎಲ್ಲ ಅಂಶಗಳ ಆಧಾರದ ಮೇಲೆ ಭಾರತದ 25 ಕೋಟಿಗೂ ಅಧಿಕ ಮಂದಿ ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದರು.

ಜನಧನ ಖಾತೆಯಲ್ಲಿ ಇಂದು ಎರಡು ಲ ಕೋಟಿ ರೂ.ಗೂ ಅಧಿಕ ಉಳಿತಾಯ ಹಣ ಸಂಗ್ರವಾಗಿದೆ. ಇದರಿಂದ ಬಡವರ ಅರ್ಥಿಕ ಸ್ಥಿತಿಯ ಚಿತ್ರಣ ಸಿಗುತ್ತದೆ. ಪ್ರಧಾನಮಂತ್ರಿ ಸ್ವ&ನಿಧಿ ಯೋಜನೆಯ ಸಹಾಯದಿಂದ ಸಣ್ಣ ಪುಟ್ಟ ವ್ಯಾಪಾರಿಗಳು ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ ಬ್ಯಾಂಕ್​ ನಿಂದ ನೇರ ಸಾಲ ಪಡೆದು ವ್ಯಾಪಾರ ಮಾಡಬಹುದಾಗಿದೆ. ದೇಶಾದ್ಯಂತ ಕೋಟ್ಯಾಂತರ ಮಂದಿ ಇದರ ಲಾಭ ಪಡೆಯುತ್ತಿದ್ದಾರೆ ಎಂದರು.

ಭಾರತದ ಆರ್ಥಿಕ ಪ್ರಗತಿಯಲ್ಲಿ ಭಾರತೀಯ ಲೆಕ್ಕಪರಿಶೋಧಕರ ಪಾತ್ರ ಮಹತ್ವದಾಗಿದೆ. ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ದೇಶದ ಲೆಕ್ಕಪರಿಶೋಧಕರು ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಅರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಿದ್ದಾರೆ ಎಂದು ಲೆಕ್ಕಪರಿಶೋಧಕರನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು.

ಭಾರತೀಯ ಚಾರ್ಟರ್ಡ್​ ಅಕೌಂಟೆಂಟ್​ ಸಂಸ್ಥೆಯ ದಣ ಭಾರತ ಪ್ರಾಂತೀಯ ಮಂಡಳಿಯ ಬೆಂಗಳೂರು ಟಕದ ಅಧ್ಯಕ್ಷ ಪ್ರಮೋದ್​ ಅರ್​ ಹೆಗಡೆ ಮಾತನಾಡಿ, ಭಾರತದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ಲೆಕ್ಕಪರಿಶೋಧಕರು ಬೆಂಗಳೂರಿನಲ್ಲಿದ್ದು, ದೇಶದ ಆರ್ಥಿಕ ಪ್ರಗತಿಗೆ ಆರಂಭದಿಂದಲೂ ಸಹಕಾರ ನೀಡುತ್ತಿದ್ದಾರೆ ಎಂದರು.

ಕಾರ್ಯದರ್ಶಿ ಕವಿತಾ ಪರಮೇಶ್​, ಸೆಂಟ್ರಲ್​ ಕೌನ್ಸಿಲ್​ ಸದಸ್ಯ ಕೋಥಾ ಶೀನಿವಾಸ್​, ದಣ ಭಾರತೀಯ ಪ್ರಾದೇಶಿಕ ಮಂಡಳಿ ಸದಸ್ಯೆ ಎ.ಬಿ.ಗೀತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net