ನಿರ್ದಿಗಂತ ಉತ್ಸವ 22ರಿಂದ

3 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಿರ್ದಿಗಂತ ಸಂಸ್ಥೆ ವತಿಯಿಂದ ಫೆ. 22ರಿಂದ 25ರವರೆಗೆ ನಗರದ ಸೃಜನಾ ರಂಗ ಮಂದಿರದಲ್ಲಿ ನಿರ್ದಿಗಂತ ಉತ್ಸವ ಏರ್ಪಡಿಸಲಾಗಿದೆ ಎಂದು ಸಂಸ್ಥೆ ಸಂಸ್ಥಾಪಕ, ನಟ ಪ್ರಕಾಶ ರಾಜ್​ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 22ರಂದು ಬೆಳಗ್ಗೆ 9.30ಕ್ಕೆ ಗಣೇಶ ಎನ್​ ದೇವಿ ಉತ್ಸವಕ್ಕೆ ಚಾಲನೆ ನೀಡುವರು. 10.30ಕ್ಕೆ ರಾಜೇಂದ್ರ ಚೆನ್ನಿ ಆಶಯ ಭಾಷಣ ಮಂಡಿಸುವರು. 12 ಗಂಟೆಗೆ ಶಕೀಲ್​ ಅಹ್ಮದ್​ ನಿರ್ದೇಶನದ ಅನಾಮಿಕನ ಸಾವು ನಾಟಕ, 3 ಗಂಟೆಗೆ ಶ್ರೀ ಮಂಜುನಾಥ ಶ್ರೀಕೃಷ್ಣ ಪಾರಿಜಾತ ಬಯಲಾಟ ಸಂಘದಿಂದ ಶ್ರೀ ಕೃಷ್ಣ ಪಾರಿಜಾತ ಪ್ರದರ್ಶನ, 4 ಗಂಟೆಗೆ ನೆಲ-ಜಲ-ಬದುಕು ಕುರಿತು ಕೃಪಾಕರ ಸೇನಾನಿ ಮಾತನಾಡುವರು. ಸಂಜೆ 5.30ಕ್ಕೆ ರಾಘವ ಕಮ್ಮಾರ ತಂಡದಿಂದ ರಂಗಸಂಗೀತ ಹಾಗೂ ರಾತ್ರಿ 7 ಗಂಟೆಗೆ ಶ್ರವಣ ಹೆಗ್ಗೋಡು ನಿರ್ದೇಶನದ ನಾಟಕ ಪ್ರದರ್ಶನವಾಗಲಿದೆ ಎಂದರು.

ಫೆ. 23ರಂದು ಬೆಳಗ್ಗೆ 9.30ಕ್ಕೆ ಮೊದಲ ದಿನ ಪ್ರದರ್ಶನಗೊಂಡ ನಾಟಕಗಳ ಕುರಿತು ಚರ್ಚೆ, 10.30ಕ್ಕೆ ಸಮಕಾಲೀನ ರಂಗಭೂಮಿ: ಕಸಬುಗಾರಿಕೆಯ ಹುಡುಕಾಟ ಕುರಿತು ಕೆ.ವೈ. ನಾರಾಯಣಸ್ವಾಮಿ ಮಾತನಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಡಾ. ಸವಿತಾ ರಾಣಿ ನಿರ್ದೇಶನದ ರಶೀದಿ ಟಿಕೆಟ್​ ನಾಟಕ, 3 ಗಂಟೆಗೆ ಕಥಾ-ಕಾವ್ಯ ಕಾರಣ ಕುರಿತು ಆರಿಫ್ ರಾಜ, ಚಿದಾನಂದ ಸಾಲಿ, ಅನಸೂಯ ಕಾಂಬ್ಳಿ, ಟಿ.ಎಸ್​. ಗೊರವರ, 4 ಗಂಟೆಗೆ ಸಮಕಾಲೀನ ಸೃಜನಶೀಲತೆಯ ಸ್ವರೂಪ ಕುರಿತು ವಿನಯ ಒಕ್ಕುಂದ ಮಾತನಾಡುವರು. ಸಂಜೆ 5.30ಕ್ಕೆ ಕಲ್ಯಾಣ ಕರ್ನಾಟಕ ಸೂಫಿಯಾನ್​ ಗ್ರುಪ್​ನಿಂದ ಕವ್ವಾಲಿ ಹಾಗೂ 7 ಗಂಟೆಗೆ ಶಕೀಲ್​ ಅಹ್ಮದ್​ ನಿರ್ದೇಶನದ ತಿಂಡಿಗೆ ಬಂದ ತುಂಡೇರಾಯ ನಾಟಕ ಪ್ರಸ್ತುತಪಡಿಸಲಿದೆ ಎಂದರು.

ಫೆ. 24ರಂದು ಬೆಳಗ್ಗೆ 9.30ಕ್ಕೆ ಹಿಂದಿನ ದಿನದ ನಾಟಕಗಳ ಚರ್ಚೆ, 10.30ಕ್ಕೆ ವೃತ್ತಿ ರಂಗಭೂಮಿಯ ಸಾತಥ್ಯತೆಯ ಪ್ರಶ್ನೆ ಕುರಿತು ಪ್ರಕಾಶ ಗರುಡ ಮಾತನಾಡುವರು. 12 ಗಂಟೆಗೆ ಹೊಸಕೋಟೆಯ ಬಹುತ್ವ ಪ್ರತಿಷ್ಠಾನ ತಂಡದಿಂದ ಸಹನಾ ನಿರ್ದೇಶನದ ಸುಣ್ಣದ ಗೊಂಬೆ ನಾಟಕ, 3 ಗಂಟೆಗೆ ರಜನಿ ಗರುಡ ನಿರ್ದೇಶನದಲ್ಲಿ ಅದ್ಭುತ ರಾಮಾಯಣ ತೊಗಲು ಗೊಂಬೆಯಾಟ ಪ್ರದರ್ಶನವಾಗಲಿದೆ. 4 ಗಂಟೆಗೆ ತತ್ವಪದ-ಅಂತರಂಗ ಕುರಿತು ರೆಹಮತ್​ ತರಿಕೆರೆ ಮಾತನಾಡುವರು. 5.30ಕ್ಕೆ ಸಮತೆಯ ಹಾಡುಗಳು, 7 ಗಂಟೆಗೆ ಮಂಗಳೂರಿನ ಸ್ತಿತ್ವ ತಂಡದಿಂದ ಅರುಣ ಲಾಲ್​ ನಿರ್ದೇಶನದ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಫೆ. 25ರಂದು ಬೆಳಗ್ಗೆ 9.30ಕ್ಕೆ ನಾಟಕಗಳ ಚರ್ಚೆ, 10.30ಕ್ಕೆ ಜನಪದ ರಂಗ ಪ್ರದರ್ಶನ ಮತ್ತು ಸ್ಥಿತ್ಯಂತರಗಳು ಕುರಿತು ವಿಕ್ರಂ ವಿಸಾಜಿ ಮಾತನಾಡಲಿದ್ದಾರೆ. 12 ಗಂಟೆಗೆ ಅಮಿತ ರೆಡ್ಡಿ ನಿರ್ದೇಶನದ ಮೈ ಮನಗಳ ಸುಳಿಯಲ್ಲಿ ನಾಟಕ, 3 ಗಂಟೆಗೆ ಸಿದ್ದಾಪುರದ ಶ್ರೀ ಗುರುಪ್ರಸಾದ ಜನಪದ ತಂಡದಿಂದ ಚೌಡಕಿ ಪದ ಪ್ರಸ್ತುತವಾಗಲಿದೆ. 4 ಗಂಟೆಗೆ ಜನ ಚಳುವಳಿ: ಹೋರಾಟದ ಹಾದಿಗಳು ಕುರಿತು ಮೇಟಿ ಮಲ್ಲಿಕಾರ್ಜುನ ಮಾತನಾಡುವರು. ಸಂಜೆ 5.30ಕ್ಕೆ ಮೈಸೂರಿನ ನಾವು ಬ್ಯಾಂಡ್​ ತಂಡದಿಂದ ಸಂಗೀತ, 7 ಗಂಟೆಗೆ ಧಾರವಾಡದ ಆಟಮಾಟ ತಂಡದಿಂದ ಮಹದೇವ ಹಡಪದ ನಿರ್ದೇಶನದ ಗುಡಿಯ ನೋಡಿರಣ್ಣ ನಾಟಕ ಪ್ರದರ್ಶನವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net