ನಿರ್ಭಿಡೆಯ ವರದಿಗಾರಿಕೆ ಸ್ಮರಣೀಯ

Nirbhide's reporting is memorable
ತಾಳಿಕೋಟೆ ಪಟ್ಟಣದ ಶಿವಾಜಿ ಮಹಾರಾಜರ ವೃತ್ತದಲ್ಲಿ ಪತ್ರಕರ್ತ ಜಿ.ಟಿ.ೂರ್ಪಡೆ ಅವರನ್ನು ಸನ್ಮಾನಿಸಲಾಯಿತು. ಪ್ರಕಾಶ ಹಜೇರಿ, ಕಾಶಿನಾಥ ಮುರಾಳ, ಸುವರ್ಣಾ ಬಿರಾದಾರ, ವಿರುಪಾಯ್ಯ ಹಿರೇಮಠ ಇತರರಿದ್ದರು.
Published on

ತಾಳಿಕೋಟೆ: ಪತ್ರಕರ್ತ ಜಿ.ಟಿ. ಘೋರ್ಪಡೆ ಅವರು 75 ವರ್ಷ ವಯೋಮಿತಿ ಪೂರೈಸಿದ ಪ್ರಯುಕ್ತ ಸೋಮವಾರ ಪಟ್ಟಣದ ಶಿವಾಜಿ ಮಹಾರಾಜರ ವೃತ್ತದಲ್ಲಿ ಆತ್ಮೀಯರು, ಹಿತೈಷಿಗಳು, ಸ್ನೇಹಿತರು ಕೂಡಿ ಸನ್ಮಾನಿಸಿದರು. ಬೃಹತ್​ ಆಕಾರದ ಕೇಕ್​ನ್ನು ಪತ್ರಕರ್ತ ಜಿ.ಟಿ.ಘೋರ್ಪಡೆ ಕತ್ತರಿಸಿದರು.

ಯುವ ಮುಖಂಡ ಪ್ರಕಾಶ ಹಜೇರಿ ಮಾತನಾಡಿ, ಪತ್ರಿಕಾ ವೃತ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ತಾಳಿಕೋಟೆಯ ಜನತೆಯಿಂದ ಸೈ ಎನ್ನಿಸಿಕೊಂಡಿದ್ದು ಸ್ಮರಣೀಯ.

ಪಟ್ಟಣದ ಸ್ಥಿತಿಗತಿ ಕುರಿತು ಪತ್ರಿಕೆಗಳಲ್ಲಿ ರ್ನಿಭಿಡೆಯ ವರದಿಗಳನ್ನು ಮಾಡಿ ಸಂಬಂಧಿಸಿದ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಕೂಡಲೇ ಸ್ಪಂದಿಸುವಂತೆ ಮಾಡಿದ ಕೀರ್ತಿ ಘೋರ್ಪಡೆ ಅವರಿಗೆ ಸಲ್ಲುತ್ತದೆ ಎಂದರು.

ವೀರಶೈವ ವಿದ್ಯಾವರ್ಧಕ ಸಂದ ಸಹ ಕಾರ್ಯದರ್ಶಿ ಕಾಶಿನಾಥ ಮುರಾಳ ಮಾತನಾಡಿ, ಘೋರ್ಪಡೆ ಅವರ ಸೇವಾ ಕಾರ್ಯದಲ್ಲಿ ನಾವು ಕೂಡ ಭಾಗವಹಿಸುತ್ತಾ ಸಾಗಿದ್ದು, ತಾಳಿಕೋಟೆ ಪಟ್ಟಣಕ್ಕೆ ಅಗತ್ಯವಾದಂ ಅನೇಕ ಅಗತ್ಯ ಸರ್ಕಾರಿ, ಸರ್ಕಾರೇತರ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ಸುದ್ದಿಗಳನ್ನು ಜನರಿಗೆ ಮನದಟ್ಟುವಂತೆ ಮಾಡಿ ಪಟ್ಟಣದ ಜನತೆಯೊಂದಿಗೆ ಮೆಚ್ಚುಗೆ ಪಡೆದಿದ್ದಾರೆ ಎಂದರು.

ರಾಜ್ಯ ಮೌರ್ಯ ಪ್ರಶಸ್ತಿ ಪುರಸತ ಸುವರ್ಣಾ ಬಿರಾದಾರ ಹಾಗೂ ವೀರಶೈವ ವಿದ್ಯಾವರ್ಧಕ ಸಂದ ಅಧ್ಯ ವಿರುಪಾಯ್ಯ ಹಿರೇಮಠ (ಹಂಪಿಮುತ್ಯಾ) ಅವರು ಘೋರ್ಪಡೆ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ಪುರಸಭಾ ಸದಸ್ಯ ಅಣ್ಣಾಜಿ ಜಗತಾಪ, ಯುವ ಮುಖಂಡರಾದ ಎಂ.ಎಸ್​.ಸರಶೆಟ್ಟಿ, ಅಶೋಕ ಜಾಲವಾದಿ, ಮಂಜುನಾಥ ಶೆಟ್ಟಿ, ರವಿ ಕಟ್ಟಿಮನಿ, ಪ್ರಭು ಬಿಳೇಭಾವಿ, ಮುರುಗೇಶ ಕೋರಿ, ಮಲ್ಲು ಮೇಟಿ, ರಾಮು ಜಗತಾಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net