ಹುಬ್ಬಳ್ಳಿ: ನಗರಕ್ಕೆ ಭಾಗಶಃ ಕುಡಿಯುವ ನೀರು ಪೂರೈಸುವ ಕಲಘಟಗಿ ತಾಲೂಕಿನ ನೀರಸಾಗರ ಜಲಾಶಯ ಭತಿರ್ಯಾಗಿದೆ..ಗುರುವಾರ ಜಲಾಶಯ ಪೂರ್ಣ ತುಂಬಿಕೊಂಡು ಕೋಡಿ ಹರಿದಿದೆ. .ಜಲಾಶಯದಿಂದ ನೀರು ಹೊರಚೆಲ್ಲುವ ದೃಶ್ಯ ನಯನ ಮನೋಹರವಾಗಿದ್ದು, ಪ್ರೇಕ್ಷಕರನ್ನು ಸೆಳೆಯುತ್ತಿದೆ ಎಂದು ಸ್ಥಳಿಯರಾದ ಮಹಾವೀರ ಹಾಗೂ ಇತರರು ತಿಳಿಸಿದ್ದಾರೆ.