ನೀರಸಾಗರ ಭರ್ತಿಗೆ ಒಂದೇ ಅಡಿ ಬಾಕಿ

IMG-20240731-WA0023.jpg
Published on

ಹುಬ್ಬಳ್ಳಿ: ನಗರದ ಭಾಗಶಃ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಕಲಟಗಿ ತಾಲೂಕಿನ ನೀರಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗುವ ಹಂತದಲ್ಲಿದೆ.

ಕಳೆದ ಎರಡು ವಾರದಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಪ್ರಮಾಣದ ನೀರು ಹರಿದು ಬಂದಿದೆ. ಇದೀಗ ಜಲಾಶಯ ಭರ್ತಿಗೆ ಇನ್ನೊಂದು ಅಡಿ ಮಾತ್ರ ಬಾಕಿ ಇದೆ.

ನೀರಸಾಗರ ಜಲಾಶಯದ ಪ್ರವಾಹದ ಗರಿಷ್ಠ ಮಟ್ಟವು 592 ಅಡಿ ಇದ್ದು, ಸದ್ಯ 591 ಅಡಿ ಆಸುಪಾಸಿನಲ್ಲಿದೆ. ಇದನ್ನು ಜಲಾಶಯದಲ್ಲಿರುವ ಮಾಪಕದಲ್ಲಿ ಕಾಣಬಹುದಾಗಿದೆ.

ನೀರಸಾಗರಕ್ಕೆ ಬೇಡ್ತಿ ಹಳ್ಳ ಜಲಮೂಲವಾಗಿದೆ. ಇದರ ಜಲಸಂಗ್ರಹಣೆಯ ಗರಿಷ್ಠ ಮಟ್ಟ 590.70 ಅಡಿ ಇದೆ. ಇನ್ನಷ್ಟು ಮಳೆಯಾದರೆ ಶೀಘ್ರ ಭರ್ತಿಯಾಗಿ ಕೋಡಿ ಹರಿಯಲಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net