ನೀರಮಾನ್ವಿಯಲ್ಲಿ ಮೇಕೆ ಕೊಂದ ಚಿರತೆ

leopard
Published on

ಮಾನ್ವಿ: ತಾಲೂಕಿನ ನೀರಮಾನ್ವಿ ಗುಡ್ಡದಲ್ಲಿ ಸೋಮವಾರ ಮೇಕೆಯನ್ನು ಚಿರತೆ ಕೊಂದಿದ್ದು, ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ. ಆರು ತಿಂಗಳ ಬಳಿಕ ಗುಡ್ಡದಲ್ಲಿ ಚಿರತೆ ಮತ್ತೆ ಕಾಣಿಸಿಕೊಂಡಿದೆ. ಆಗ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕೆಲ ದಿನ ಗುಡ್ಡದಲ್ಲಿ ಠಿಕಾಣಿ ಹೂಡಿದ್ದರು. ಬೋನು, ಸಿಸಿ ಕ್ಯಾಮರಾ ಅಳವಡಿಸಿದ್ದರೂ ಚಿರತೆ ಕಂಡಿರಲಿಲ್ಲ. ನಂತರ ಆಗಾಗ ಗ್ರಾಮಸ್ಥರ ಕಣ್ಣಿಗೆ ಕಂಡರೂ ಯಾರಿಗೂ ತೊಂದರೆ ಕೊಟ್ಟಿರಲಿಲ್ಲ. ಮೇಕೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲಿಸಿದ್ದಾರೆ. ಮಂಗಳವಾರವೂ ಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿರುವುದನ್ನು ಕೆಲವರು ಮೊಬೈಲ್‌ನಲ್ಲಿ ಸೆರೆ ಹಿಡಿದು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಗುಡ್ಡದಲ್ಲಿ ಕ್ಯಾಮರಾಗಳನ್ನು ಅಳವಡಿಸಿ, ಚಿರತೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮಸ್ಥರು ಅನವಶ್ಯ ಗುಡ್ಡದ ಕಡೆ ಹೋಗಬಾರದು. ಜನರು ಗುಡ್ಡದ ಕಡೆ ಹೋದರೆ ಚಿರತೆ ಸ್ಥಳ ಬದಲಾಯಿಸುವ ಸಾಧ್ಯತೆ ಇರುತ್ತದೆ.| ರಾಜೇಶನಾಯಕ, ಅರಣ್ಯ ಅಧಿಕಾರಿ, ಮಾನ್ವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net