

ಹಿರಿಯೂರು: ತಾಲೂಕಿನ ಆದಿವಾಲ ಗ್ರಾಪಂ ಅಧ್ಯಕ್ಷೆಯಾಗಿ ಸಣ್ಣಮ್ಮ ಕುಬೇರಪ್ಪ ಅವಿರೋಧ ಆಯ್ಕೆಯಾರೆ, ಉಪಾಧ್ಯಕ್ಷೆ ಸ್ಥಾನಕ್ಕೆ ವಿಜಯಲಕ್ಷ್ಮೀ 15 ಮತ ಪಡೆದು ವಿಜಯ ಸಾಧಿಸಿದರು.
ಆದಿವಾಲ ಪಂಚಾಯಿತಿ ವ್ಯಾಪ್ತಿಯ ನಂದಿಹಳ್ಳಿ ಗ್ರಾಮದಲ್ಲಿ ಕುಬೇರಪ್ಪ ನೀರಗಂಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪತ್ನಿಗೆ ಅಧ್ಯಕ್ಷೆ ಪಟ್ಟ ಸಿಕ್ಕಿರುವುದು ಪ್ರಜಾಪ್ರಭುತ್ವದ ಸೂಚಕ ಎಂದು ಗಣ್ಯರು, ಜನಪ್ರತಿನಿಧಿಗಳು ಬಣ್ಣಿಸಿದರು.
ಚುನಾವಣಾಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದಿನೇಶ್ ಕಾರ್ಯ ನಿರ್ವಹಿಸಿದರು. ಪಿಡಿಒ ರಾಜೇಶ್ವರಿ, ಗ್ರಾಪಂ ಮಾಜಿ ಅಧ್ಯಕ್ಷ ಸುಬಾನ್ ಖಾನ್, ಕಿರಣ್, ಸಾಕಮ್ಮ, ಚಂದ್ರಶೇಖರ್, ಮಹಲಿಂಗಪ್ಪ, ರಂಗಸ್ವಾಮಿ ಇತರರಿದ್ದರು.