

ಬೋರಗಾಂವ: ನಿಪ್ಪಾಣಿ ಕ್ಷೇತ್ರದ ಎಲ್ಲ ಮತದಾರರ ಸಮಸ್ಯೆ ಪರಿಹರಿಸಲು ಪ್ರಯತ್ನಿಸಿದ್ದು, ಕ್ಷೇತ್ರವು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ತಾಲೂಕಿನ ಮಾಂಗೂರಿನಲ್ಲಿ ಮಾಂಗೂರು-ಬಾರವಾಡ ರಸ್ತೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ತಾರತಮ್ಯ ಮಾಡದೆ ಎಲ್ಲರಿಗೆ ಸರ್ಕಾರದ ನಾನಾ ಯೋಜನೆ ತಲುಪಿಸಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಆತ್ಮನಿರ್ಭರ ಭಾರತಕ್ಕಾಗಿ ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ರಸ್ತೆ ಡಾಂಬರೀಕರಣಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ೨ ಕೋಟಿ ರೂ., ಸಿದ್ಧಿವಿನಾಯಕ ದೇವಸ್ಥಾನಕ್ಕೆ ೫ ಲಕ್ಷ ರೂ., ವಾಲ್ಮೀಕಿ ಸಮುದಾಯ ಭವನಕ್ಕೆ ೫ ಲಕ್ಷ ರೂ. ಮತ್ತು ಪಾರ್ಶ್ವನಾಥ ಜೈನ ದೇವಸ್ಥಾನಕ್ಕೆ ೫ ಲಕ್ಷ ರೂ. ಅನುದಾನ ನೀಡಲಾಗಿದೆ ಎಂದರು.
ಮುಖ್ಯಮಂತ್ರಿಗಳ ಪರಿಹಾರ ನಿಧಿ ಚೆಕ್, ವೃದ್ಧರಿಗೆ ಮಂಜೂರಾದ ಪಿಂಚಣಿ ಪತ್ರಗಳು ಮತ್ತು ಪ್ರಧಾನಮಂತ್ರಿಗಳ ವಿಶ್ವಕರ್ಮ ಯೋಜನೆಯಡಿ ಟೂಲ್‌ಕಿಟ್ ವಿತರಿಸಿದರು.
ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಪವನ ಪಾಟೀಲ, ನಿರ್ದೇಶಕ ರಮೇಶ ಪಾಟೀಲ, ಶ್ರೀಕಾಂತ ಕಣಗಲೆ, ಯುವ ಮುಖಂಡ ನಿತೀಶ ಖೋತ, ಪ್ರದೀಪ ಚೌಗುಲೆ, ರಾಜು ಕುರಡೆ, ದೇವದತ್ತ ರಾಜಹಂಸ, ಸುಜಾತಾ ಚೌಗುಲೆ, ವಿನೋದ ಭೋದಲೆ, ಕುಮಾರ ಬನ್ನೆ, ಓಂಕಾರ ಸುತಾರ, ಅನಿಕೇತ ಪಾಟೀಲ, ಗುಣಧರ ನಿರ್ವಾಣೆ, ಧೋಂಡಿರಾಮ ಚೌಗುಲೆ, ರಾಜೇಂದ್ರ ಪಾಟೀಲ, ರಾಜು ಭದರಗಡೆ, ಬಾಬಾಸಾಹೇಬ ಪಾಟೀಲ, ಬೇನಾಡಿ ಗ್ರಾಪಂ ಅಧ್ಯಕ್ಷ ಸತ್ಯಪ್ಪ ಹಜಾರೆ, ಬಾಪುಸೋ ಪಾಟೀಲ, ರಮೇಶ ಉಮರಾಣೆ, ಮಲ್ಲಿಕಾರ್ಜುನ ಖೋತ ಇತರರಿದ್ದರು.