ನಿಪ್ಪಾಣಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ

25npn1
Published on

ನಿಪ್ಪಾಣಿ: ನಿಪ್ಪಾಣಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ಜೊಲ್ಲೆ ಕುಟುಂಬದ ಗುರಿಯಾಗಿದೆ. ಕಾಮಗಾರಿಗಳ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ತಾಲೂಕಿನ ಬೆನಾಡಿ-ಕುನ್ನೂರ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 11.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಸತತ ಮೂರು ಬಾರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಂದರ್ಭದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಳಿಸಲಾಗಿದೆ. ಸಂಸ್ಕಾರ, ಸಂಸ್ಕೃತಿ ಮತ್ತು ಅಭಿವೃದ್ಧಿ ಮೂಲಕ ಜನ ಪರ ಸೇವೆ ಮುಂದುವರಿಸಿದ್ದೇವೆ ಎಂದರು.

ಕೃಷಿ ಅಭಿವೃದ್ಧಿಗಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಜಲ ಸಿಂಚನ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಪರಿಣಾಮವಾಗಿ ಇಂದು ಶೇಂಡೂರನಂತಹ ಗುಡ್ಡುಗಾಡು ಪ್ರದೇಶಗಳಲ್ಲಿಯೂ ಕೇವಲ 24 ಅಡಿಗೆ ನೀರು ದೊರೆಯುವಂತಾಗಿದೆ. ಕ್ಷೇತ್ರದ ಯುವ ಪೀಳಿಗೆ ಸುಸಂಸ್ಕೃತರಾಗಲು ವಿವಿಧ ಚಟುವಟಿಕೆ ಅನುಷ್ಠಾನಗೊಳಿಸಲಾಗುತ್ತಿದೆ. ಶೈಕ್ಷಣಿಕ ಪ್ರಗತಿ ಸಾಧಿಸಲು ಅಣ್ಣಾಸಾಹೇಬ ಜೊಲ್ಲೆ ವಸತಿ ಕಾಲೇಜು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಿದ್ದು ನರಾಟೆ ಮಾತನಾಡಿ, ಬೆನಾಡಿ-ಕುನ್ನೂರ ರಸ್ತೆಯ ಡಾಂಬರೀಕರಣಕ್ಕಾಗಿ 11.50 ಕೋಟಿ ರೂ. ಅನುದಾನ ತರಲು ಜೊಲ್ಲೆ ದಂಪತಿ ಅವಿರತವಾಗಿ ಪ್ರಯತ್ನಿಸಿದ್ದರು. ಅದರ ಲವಾಗಿ ಜನರಿಗೆ ಗುಣಮಟ್ಟದ ರಸ್ತೆಯಲ್ಲಿ ಸಂಚರಿಸಲು ಅನುಕೂಲವಾಗಲಿದೆ. ಅವರ ಕಾಲಾವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಉತ್ತಮ ಗುಣಮಟ್ಟದಿಂದ ಕೂಡಿವೆ ಎಂದು ತಿಳಿಸಿದರು.

ಸ್ಥಳೀಯ ನಗರಸಭೆ ಅಧ್ಯಕ್ಷೆ ಸೋನಲ ಕೊಠಡಿಯಾ ಮಾತನಾಡಿ, ಜೊಲ್ಲೆ ದಂಪತಿ ಮೂಲಕ ನಿಪ್ಪಾಣಿ ಕ್ಷೇತ್ರಕ್ಕೆ ಅಭಿವೃದ್ಧಿಯ ಹೊಸ ರೂಪು ದೊರೆಯಿತು. ಚಿಕ್ಕೋಡಿಯನ್ನು ಆಕಾಶದೆತ್ತರಕ್ಕೆ ಕೊಂಡೊಯ್ಯುವ ಕಾರ್ಯ ಜೊಲ್ಲೆ ದಂಪತಿ ಮಾಡಿದ್ದಾರೆ ಎಂದರು.

ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸತ್ಯಾಪ್ಪ ಹಜಾರೆ, ಸಂತೋಷ ಸಾಂಗಾವಕರ, ಹಾಲಶುಗರ್‌ನ ಸಂಚಾಲಕ ಅವಿನಾಶ ಪಾಟೀಲ, ಪ್ರಕಾಶ ಶಿಂಧೆ, ಸಮಿತ ಸಾಸನೆ, ರಾವಸಾಹೇಬ ರಾಳೆ, ಶ್ರೀಕಾಂತ ಬನ್ನೆ, ರಾಜೇಶ ಕೊಠಡಿಯಾ, ವಿಜಯ ಟವಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net