

ಮೂಡುಬಿದಿರೆ: ಸಂಕೀರ್ತನಕಾರ ದಿ. ಎಂ.ಉಮೇಶ್ ಕಾಮತ್ ಮೂಡುಬಿದಿರೆ ಅವರ ರಚನೆಯ ‘ನಿನ್ನನೇ ನಂಬಿದೆ ಮೂಡುವೇಣುಪುರದೊಡೆಯ’ 14 ಕೀರ್ತನೆಗಳ ಧ್ವನಿ ಸಂಕಲನವನ್ನು ಮಂಗಳೂರಿನ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಕಾಶೀಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.
ಸಂಕಲನದ ನಿರ್ದೇಶಕ ಎಂ.ಗಣೇಶ್ ಕಾಮತ್ ಮಾತನಾಡಿ, ಮೂಡುಬಿದಿರೆ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವೆಂಕಟರಮಣ ಭಜನಾ ಮಂಡಳಿಯ ಸ್ಥಾಪಕ ಸದಸ್ಯ ಉಮೇಶ್ ಕಾಮತ್ ಅವರ ಅಮೃತ ವರ್ಷಸಂಸ್ಮರಣೆಯ ಸಂದರ್ಭದಲ್ಲೇ ಭಜನಾ ಮಂಡಳಿಂಯೂ ವಜ್ರಮಹೋತ್ಸವದಲ್ಲಿದೆ ಎಂದರು.
ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ಸಾಹುಕಾರ್ ಎಂ. ಕಿರಣ್ ಪೈ, ಕೆ.ಗಣೇಶ್ ಕಾಮತ್, ಸೇವಾದಾರರಾದ ಶಾಂತಾ ಉಮೇಶ್ ಕಾಮತ್, ಪುತ್ರ ಎಂ.ಹರೀಶ ಕಾಮತ್, ಬಿ.ಯೋಗೀಶ್ ಶೆಣೈ, ಕೆ.ರಮಾನಂದ ಪೈ ಐ.ರವೀಂದ್ರ ಶೆಣೈ ದಾಮಸಕಟ್ಟೆ ಕುಟುಂಬಸ್ಥರು, ಸಂಕೀರ್ತನೆಗಳ ಗಾಯಕ ರವೀಂದ್ರ ಪ್ರಭು ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು.