ಕುಸ್ತಿಯಲ್ಲಿ ಬೆಳ್ಳಿ ಕಡಗ ಗೆದ್ದು ಮಿಂಚಿದ ನಿಂಗಪ್ಪ

LXR KUSTI
Published on

ಲಕ್ಷೆ್ಮೕಶ್ವರ: ಪಟ್ಟಣದ ಕೋಡಿಯಲ್ಲಮ್ಮ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ದೇವಸ್ಥಾನದ ಬಯಲಿನಲ್ಲಿ ಫೈನಲ್ ಕುಸ್ತಿ ಪಂದ್ಯ ನಡೆದವು.

ವಾರಗಿ ಕುಸ್ತಿಯಲ್ಲಿ ಕಣಗಿನಹಾಳದ ಬಸವರಾಜ ಅವರನ್ನು ಸೋಲಿಸಿದ ಬೊಮ್ಮನಹಳ್ಳಿಯ ನಿಂಗಪ್ಪ ಬೆಳ್ಳಿ ಕಡಗ ಮತ್ತು ಪ್ರಶಸ್ತಿ ಮುಡಿಗೇರಿಸಿಕೊಂಡರು.

ಪರಸಿ ಪೈಕಿ ಕುಸ್ತಿಯಲ್ಲೂ ಹಿರೇಕೆರೂರದ ಕಿರಣ ಪೈಲ್ವಾನ್​ರೊಂದಿಗೆ ಸೆಣಸಿ ಚಿತ್ ಮೂಲಕ ಬೊಮ್ಮನಹಳ್ಳಿಯ ಪೈಲ್ವಾನ್ ನಿಂಗಪ್ಪ ವಿಜೇತರಾಗಿ ಬೆಳ್ಳಿ ಕಡಗ ಧರಿಸಿಕೊಂಡರು. ಎರಡು ವಿಭಾಗಗಳಲ್ಲೂ ತಮ್ಮ ಸಾಮರ್ಥ್ಯ ಮೆರೆದರು. ನಿಂಗಪ್ಪ ವಿಜೇತರಾಗುತ್ತಿದ್ದಂತೆ ಕುಸ್ತಿ ಅಭಿಮಾನಿಗಳು, ಯುವಕರು ಮೈದಾನಕ್ಕೆ ನುಗ್ಗಿ ಅವರನ್ನು ಹೊತ್ತು ಸಂಭ್ರಮಿಸಿದರು.

ಪಂದ್ಯಾವಳಿಯಲ್ಲಿ ಸೆಣಸಿದ ಕಲಿಗಳ ವಿವಿಧ ಭಂಗಿ, ಪಟ್ಟು, ಕರಾಮತ್ತುಗಳು ನೋಡುಗರ ಮೈನವಿರೇಳಿಸುವಂತೆ ಮಾಡಿದವು.

ಮೂರು ದಿನ ನಡೆದ ಕುಸ್ತಿ ಸೆಣಸಾಟದಲ್ಲಿ ಧಾರವಾಡ, ಹುಬ್ಬಳ್ಳಿ, ಹಾವೇರಿ, ಕೊಲ್ಹಾಪುರ, ಕಲಬುರಗಿ, ಹೊನ್ನಳ್ಳಿ, ಹಿರೇಕೆರೂರ, ಬಾಲೆಹೊಸೂರ, ಬೊಮ್ಮನಹಳ್ಳಿ, ಲಕ್ಕುಂಡಿ, ಜಮಖಂಡಿ, ಜಕ್ಕಲಿ, ಮುಳಗುಂದ, ಕಣಗಿನಹಾಳ ಮತ್ತಿತರ ಕಡೆಯಿಂದ 50ಕ್ಕೂ ಹೆಚ್ಚು ಪೈಲ್ವಾನರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net