ತೊಂಬತ್ತು ಲಕ್ಷ ರೂ. ಅನುದಾನ ಮಂಜೂರು

5CKD1
Published on

ಚಿಕ್ಕೋಡಿ: ಪಟ್ಟಣದ ವಿಶ್ವೇಶ್ವರಯ್ಯ, ಕುವೆಂಪು ಮತ್ತು ಸಂಗೊಳ್ಳಿ ರಾಯಣ್ಣ ನಗರ ರಸ್ತೆ ಕಾಮಗಾರಿಗೆ ೯೦ ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ರಾಮಾ ಮಾನೆ ಹೇಳಿದರು.

ಪಟ್ಟಣದ ವಿಶ್ವೇಶ್ವರಯ್ಯ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಹಿರಿಯ ಪತ್ರಕರ್ತ ಸಂಜೀವ ಕಾಂಬಳೆ ಮಾತನಾಡಿದರು.

ಸುರೇಶ ಚೌಗಲಾ, ಹಿರೇಕೋಡಿ ಗ್ರಾಪಂ ಅಧ್ಯಕ್ಷೆ ರಮಾದೇವಿ ಮುಕುಂದ, ಅನಿಲ ಮಾನೆ, ಗುಲಾಬ್ ಹುಸೇನ್ ಬಾಗವಾನ್, ಸತೀಶ ದಾಮನ್ನವರ, ಗ್ರಾಪಂ ಸದಸ್ಯರಾದ ಬಾಬಾಸಾಹೇಬ ಗುಡಿಮನಿ, ರಾಮಾ ಬಂಡಗರ, ಶಂಕರ ಠೊಣ್ಣೆ, ಪಪ್ಪು ಪಟೇಲ್, ನಿಜಾಂ ಪಟೇಲ್, ದಾದಾ ಪಟೇಲ್, ಅಜರುದ್ದಿನ್ ಪಟೇಲ್, ತಾಪಂ ಮಾಜಿ ಸದಸ್ಯ ಸುರೇಶ ಚೌಗಲಾ, ರೋಹಿತ ಮುಕುಂದ, ಪ್ರಮೋದ ದಾಮನ್ನವರ, ಅನ್ಸರ್ ಮುಜಾವರ್, ಭೀಮಾ ಕಟ್ಟಿ, ಶಿವಪ್ಪ ಬಾಗನೆ, ಅಜಿತ ಸಣ್ಣಕ್ಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net