

ಜಗಳೂರು: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸೋಮವಾರ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲಾಯಿತು.
ಭಾನುವಾರ ಆಯುಧ ಪೂಜೆ ನೆರವೇರಿತು. ಸೋಮವಾರ ಮುಂಜಾನೆ ಮಹಿಳೆಯರು ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿ ಮಹಾಂಕಾಳಿ ವ್ರತವನ್ನು ಅಂತ್ಯಗೊಳಿಸಿದರು.
ಮಂಜುನಾಥ ಬಡಾವಣೆಯ ದುರ್ಗಾಂಬಿಕಾ ದೇವಿಯನ್ನು ಪುಷ್ಪ, ಪಟಗಳಿಂದ ಸಿಂಗರಿಸಿ ಚಳ್ಳಕೆರೆ ರಸ್ತೆಯ ಬನ್ನಿಮಂಟಪದ ಬಳಿ ಕರೆತಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ಅಂಬು ಛೇದಿಸಿದ ತಹಸೀಲ್ದಾರ್: ಪಟ್ಟಣದ ಹೊರವಲಯದ ಗವಿಮಠದ ಬಳಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ದಸರಾ ಅಂಬೋತ್ಸವಕ್ಕೆ ತಹಸೀಲ್ದಾರ್ ಡಾ. ನಾಗವೇಣಿ ಅಂಬು ಛೇದಿಸುವ ಮೂಲಕ ಚಾಲನೆ ನೀಡಿದರು.
ನಂತರ ನೆರೆದಿದ್ದ ಭಕ್ತರು ಒಬ್ಬರಿಗೊಬ್ಬರು ಬನ್ನಿ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಕೋರಿಕೊಂಡರು.