

ಮಡಿಕೇರಿ:
ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್‌ನ ಕೊಡಗು ಶಾಖೆ ರಾಜ್ಯಮಟ್ಟದ ಕ್ರೀಡೋತ್ಸವವನ್ನು ನಗರದಲ್ಲಿ ಭಾನುವಾರ ಹಮ್ಮಿಕೊಂಡಿತ್ತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ 50ಕ್ಕೂ ಹೆಚ್ಚಿನ ವೈದ್ಯರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದರು.
ವೈದ್ಯರಿಗಾಗಿ ಶಟಲ್‌ನಲ್ಲಿ ಪುರುಷರು, ಮಹಿಳೆಯರು, ವಿದ್ಯಾರ್ಥಿಗಳ ವಿಭಾಗ ಹಾಗೂ ಸಂಘಟಿತ ವಿಭಾಗದಲ್ಲಿ ಕ್ರೀಡಾಸ್ಪರ್ಧೆಗಳು ನಡೆದವು.
ಇದರೊಂದಿಗೆ ಚೆಸ್ ಹಾಗೂ ಕೇರಂ ಸ್ಪರ್ಧೆಗಳು ಕೂಡ ಆಯೋಜಿಸಲ್ಪಟ್ಟಿದ್ದವು. ಅ. 18 ನಡೆಯಲಿರುವ ಬೆಳ್ಳಿ ಹಬ್ಬದ ಆಚರಣೆಯಂದು ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.