ತಿ.ನರಸೀಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನಿಲಸೋಗೆ ಪ್ರದೀಪ್ ಆಯ್ಕೆ

1
Published on

ತಿ.ನರಸೀಪುರ ಬ್ಲಾಕ್ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಯುವ ಮುಖಂಡ ನಿಲಸೋಗೆ ಪ್ರದೀಪ್ ಆಯ್ಕೆಯಾಗಿದ್ದಾರೆ.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ವಿವಿಧ ಟಕಗಳಿಗೆ ನಡೆದಿದ್ದ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ತಿ.ನರಸೀಪುರ ಬ್ಲಾಕ್ ಯುವ ಕಾಂಗ್ರೆಸ್ ಟಕದಿಂದ ನಿಲಸೋಗೆ ಪ್ರದೀಪ್ ತಮ್ಮ ಪ್ರತಿ ಸ್ಪರ್ಧಿ ಸೋಮಶೇಖರ್‌ಗಿಂದ 857ಕ್ಕೂ ಅಧಿಕ ಮತ ಪಡೆದು ಚುನಾಯಿತರಾಗಿದ್ದಾರೆ.

ನಿಲಸೋಗೆ ಪ್ರದೀಪ್ ಅವರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಚಾಮರಾಜನಗರ ಲೋಕಸಭಾ ಸದಸ್ಯ ಸುನೀಲ್ ಬೋಸ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net