ಕೊಳವೆ ಬಾವಿಯಿಂದ ಚಿಮ್ಮುತ್ತಿರುವ ನೀರು

300720 Nilogal Village Borewell Water Flirt
ಹನುಮಸಾಗರ ಸಮೀಪದ ನಿಲೋಗಲ್ ಗ್ರಾಮದ ಅಚನೂರು ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಕೊಳವೆಬಾವಿಯಲ್ಲಿ ನೀರು ಚಿಮ್ಮುತ್ತಿರುವುದು.
Published on

ಹನುಮಸಾಗರ: ಸಮೀಪದ ನಿಲೋಗಲ್ ಗ್ರಾಮದ ಸುತ್ತ ಕಳೆದೆರಡು ದಿನಗಳಿಂದ ಉತ್ತಮವಾಗಿ ಮಳೆ ಸುರಿಯುತ್ತಿದ್ದರಿಂದ ಅಚನೂರು ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಕೊಳವೆಬಾವಿಯೊಂದರಲ್ಲಿ ನೀರು ಚಿಮ್ಮುತ್ತಿದೆ.

ಅಚನೂರು ಮಲ್ಲಿಕಾರ್ಜುನ ದೇವಸ್ಥಾನದ ಬಳಿ ಹತ್ತು ವರ್ಷಗಳ ಹಿಂದೆ ಕೊಳವೆಬಾವಿ ಕೊರೆಸಲಾಗಿತ್ತು. ಆಗ ಸ್ವಲ್ಪ ಪ್ರಮಾಣದಲ್ಲಿ ನೀರಿನ ಸೆಲೆ ಸಿಕ್ಕಿತ್ತು. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೋರ್‌ವೆಲ್‌ನಿಂದ ನೀರು ಚಿಮುತ್ತಿದ್ದು, ಜನರನ್ನು ವಿಸ್ಮಯಗೊಳಿಸಿದೆ. ಉತ್ತಮವಾಗಿ ಸುರಿದ ಮಳೆ ಹಾಗೂ ಬೋರ್‌ವೆಲ್‌ನಿಂದ ಬರುತ್ತಿರುವ ನೀರಿನಿಂದ ಅಚನೂರು ಮಲ್ಲಿಕಾರ್ಜುನ ದೇವಸ್ಥಾನ ಬಳಿ ಇರುವ ಕೆರೆ ಭರ್ತಿಯಾಗಿದ್ದು, ಸ್ಥಳೀಯರು ಸೇರಿ ಸುತ್ತಲಿನ ಗ್ರಾಮಗಳ ರೈತರಲ್ಲಿ ಅಂತರ್ಜಲ ಮಟ್ಟ ಹೆಚ್ಚುವ ಭರವಸೆ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net