'ನಿಲ್ಲಬೇಡ' ಆಲ್ಬಂ ಸಾಂಗ್ ಬಿಡುಗಡೆ

IMG_20241105_120249_507.jpg
Published on

ಹುಬ್ಬಳ್ಳಿ: ಲಲಿತಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳಿಂದ ನಿರ್ಮಾಣವಾಗಿರುವ "ನಿಲ್ಲಬೇಡ' ಆಲ್ಬಂ ಸಾಂಗ್ ಬಿಡುಗಡೆಯಾಗಿದ್ದು, ಕೇಳುಗರ ಹೃದಯ ತಟ್ಟಿದೆ ಎಂದು ನಿರ್ದೇಶಕ ಅಭಿಷೇಕ ಮಠದ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡದ ಸುನಿಧಿ ನೀಲೋಪಂತ ಈ ಹಾಡಿಗೆ ಅತ್ಯುತ್ತಮ ನೃತ್ಯ ಮಾಡಿದ್ದು, ಯುವ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.

ನಿರ್ಮಾಪಕಿ ಪ್ರತಿಭಾ ನಿಲೋಪಂತ ಮಾತನಾಡಿ, ಚಂದನ್ ಶೆಟ್ಟಿ ಅವರು ಸಂಗೀತ ಸಂಯೋಜನೆ ಮಾಡಿ ಹಾಡಿರುವ ಆಲ್ಬ್ ಸಾಂಗ್ನಲ್ಲಿ ಮೊಮ್ಮಗಳು ಸುನಿಧಿ, ಅಭಿಷೇಕ ಮಠದ, ಅನು ಪ್ರಭಾಕರ, ಹರಿಣಿ ಶ್ರೀಕಾಂತ, ಶಶಿ ಮಾಸ್ಟರ್, ಅಜ್ಗರ್ ಅವರು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದರು.

ವಿಜಯ ಈಶ್ವರ ಅವರು ಬರೆದಿರುವ "ನಿಲ್ಲಬೇಡ' ಹಾಡು, ಯುವ ಪೀಳಿಗೆಗೆ ಗುರಿ ತಲುಪಲು ಪ್ರೇರಣೆ ನೀಡುತ್ತದೆ. ಸಾಧನೆಗೆ ದಾರಿದೀಪವಾಗಲಿದೆ. ಜೀವನದಲ್ಲಿ ಸೋತವರಿಗೆ ಮತ್ತೆ ಪ್ರಯತ್ನ ಮಾಡುವ ಹುಮ್ಮಸ್ಸು ತುಂಬುತ್ತದೆ ಎಂದರು.

ಜೀ ವಾಹಿನಿಯ ಶರಣಯ್ಯ ಮಾತನಾಡಿ, ಅತ್ಯುತ್ತಮ ಗುಣಮಟ್ಟದ ಹಾಡನ್ನು ತಂಡ ಕೊಟ್ಟಿದೆ. ಈಗಾಗಲೇ ನೋಡುಗರ ಮೆಚ್ಚುಗೆ ಗಳಿಸಿದೆ ಎಂದರು.

ಸುನಿಧಿ ಡ್ಯಾನ್ಸ್ ಮಾಸ್ಟರ್ ಸೈಯದ್, ಕೋರಿಯೋಗ್ರಾರ್ ರಾವ, ಶಿವಪ್ರಕಾಶ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net