ನೀಲಗುಂದ ಶಿವಪ್ಪಯ್ಯನವರ ಜಾತ್ರೆ

klr cross 17-1
ನೀಲಗುಂದ ಗ್ರಾಮದ ಶ್ರೀ ಶಿವಯೋಗಿ ಶಿವಪ್ಪಯ್ಯನವರ ಗದ್ದುಗೆ.
Published on

ಕುಳಗೇರಿ ಕ್ರಾಸ್: ನೀಲಗುಂದ ಗ್ರಾಮದ ಶಿವಯೋಗಿ ಶ್ರೀ ಶಿವಪ್ಪಯ್ಯನವರ ಜಾತ್ರೆ 19, 20ರಂದು ನಡೆಯಲಿದೆ. 19ರಂದು ಕಾರ್ತಿಕೋತ್ಸವ ಹಾಗೂ 20ರಂದು ಸಂಜೆ 5.30ಕ್ಕೆ ಮಹಾ ರಥೋತ್ಸವ ನಡೆಯಲಿದೆ.

ನಿತ್ಯ ಬೆಳಗ್ಗೆ ಶಿವಪ್ಪಯ್ಯನವರ ಗದ್ದುಗೆಗೆ ರುದ್ರಾಭೀಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಗ್ರಾಮದ ದೇಸಾಯಿ ಅವರ ಮನೆಯಿಂದ ಸಕಲ ವಾದ್ಯಮೇಳಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಕಲಶ ಮೆರವಣಿಗೆ ನಡೆಯಲಿದೆ. ಬಳಿಕ ಕಲಶಾರೋಹಣ ಕಾರ್ಯಕ್ರಮ ನಡೆಯಲಿದೆ. ದೇವರಿಗೆ ಅಭೀಷೇಕ ಅಲಂಕಾರ ನಡೆಯಲಿದೆ. 22 ರಂದು ನೀಲಗುಂದ ಗ್ರಾಮದ ಮಾರುತೇಶ್ವರ ಹುಚ್ಚಯ್ಯ ಉತ್ಸವ ನಡೆಯಲಿದೆ ಎಂದು ಶ್ರೀಮಠದ ಸಂಗಯ್ಯ ಶಿವಪ್ಪಯ್ಯನಮಠ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net