ಕಿಕ್ ಬಾಕ್ಸಿಂಗ್‌ನಲ್ಲಿ ನೀಲವೇಣಿ ಸಾಧನೆ

Nilaveni's achievements in kick boxing
ಕರಾಟೆಯಲ್ಲಿ ಸಾಧನೆ ಮಾಡಿದ ನೀಲವೇಣಿ ಖವೇಕರ ಅವರೊಂದಿಗೆ ಪ್ರಾಥಮಿಕ ಶಾಲೆ ಮುಖ್ಯಗುರು ಎಸ್.ಬಿ. ಹೆಗಳಾಡಿ, ಕರಾಟೆ ತರಬೇತುದಾರ ಗೌರೀಶ ಕಟ್ಟಿಮನಿ ಇತರರಿದ್ದಾರೆ.
Published on

ವಿಜಯಪುರ : ನಗರದ ಹೊರವಲಯದ ಎಕ್ಸಲಂಟ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿನಿ ನೀಲವೇಣಿ ಖವೇಕರ ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಖೇಲೋ ಇಂಡಿಯಾ ಮಹಿಳಾ ಕಿಕ್ ಬಾಕ್ಸಿಂಗ್‌ನ 37 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾಳೆ. ವಿದ್ಯಾರ್ಥಿನಿ ಸಾಧನೆಗೆ ಸಂಸ್ಥಾಪಕ ಕಾರ್ಯದರ್ಶಿ ಡಾ. ಶಿವಾನಂದ ಎನ್. ಕೆಲೂರ, ಸಂಯೋಜಕ ಎನ್.ಜಿ. ಯರನಾಳ, ಪ್ರೌಢಶಾಲೆ ಮುಖ್ಯಗುರು ರಾಜಶೇಖರ ಎಂ.ವಿ., ಪ್ರಾಥಮಿಕ ಶಾಲೆ ಮುಖ್ಯಗುರು ಎಸ್.ಬಿ. ಹೆಗಳಾಡಿ, ಕರಾಟೆ ತರಬೇತುದಾರ ಗೌರೀಶ ಕಟ್ಟಿಮನಿ, ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎನ್. ಆಲಮೇಲ, ಕಾಶಿನಾಥ ಎಚ್., ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net