

ಬೆಳಗಾವಿ: ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ನಿಲಜಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ ಬೆಂಬಲಿಗರಿಗೆ ಮುಖಭಂಗವಾಗಿದೆ.
ನೀಲಜಿ ಗ್ರಾಮ ಪಂಚಾಯತಿಯಲ್ಲಿ 22 ಜನ ಸದಸ್ಯ ಬಲ ಹೊಂದಿರುವ ಪಂಚಾಯತಿಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿತರಿಗೆ ಗ್ರಾಪಂನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಅಧ್ಯಕ್ಷರಾಗಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿಗರನ್ ಸತೀಶ ಶಹಾಪುರಕರ್, ಉಪಾಧ್ಯಕ್ಷರಾಗಿ ವಿನಂತಿ ಗೊಮ್ಮಣಾಚೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಥಾನಕ್ಕೆ ವಿನಂತಿ, ಪಲ್ಲವಿ ಇಬ್ಬರಿಗೂ ತಲಾ 11 ಮತಗಳನ್ನು ಪಡೆದುಕೊಂಡಿದ್ದಾರೆ. ಚೀಟಿಯ ಮೂಲಕ ಉಪಾಧ್ಯಕ್ಷರ ಆಯ್ಕೆ ಮಾಡಿದ ಚುನಾವಣೆ ಅಧಿಕಾರಿ. ಅಧ್ಯಕ್ಷ, ಉಪಾಧ್ಯಕ್ಷರ ಘೋಷಣೆ ಮಾಡಿದರು.
ಕಾಂಗ್ರೆಸ್ ಪಕ್ಷ ಬೆಂಬಲಿತ ನಾಲ್ವರನ್ನು ಆಪರೇಷನ್ ಮಾಡಿದ ಜಾರಕಿಹೊಳಿ ಬೆಂಬಲಿತರು. ಕಳೆದ ನಾಲ್ಕು ದಿನಗಳ ಕಾಲ ಪ್ರವಾಸಕ್ಕೆ ಹೋಗಿದ್ದ ನಾಲ್ವರು ಸದಸ್ಯರು. ಇಂದು ನೇರವಾಗಿ ಚುನಾವಣೆಗೆ ಆಗಮಿಸಿದ ಜಾರಕಿಹೊಳಿ ಬೆಂಬಲಿತ ಸದಸ್ಯರು ಮತದಾನ ಮಾಡಿದರು.
ನಿಲಜಿ ಗ್ರಾಪಂ ಸುತ್ತಮುತ್ತ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜನೆ. ಡಿಸಿಪಿ, ಇಬ್ಬರು ಎಸಿಪಿ, ಕೆ ಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿತ್ತು.