ನಿಖಿಲ್​ ಅಭಿಪ್ರಾಯ ಮೈತ್ರಿ ನಾಯಕರ ತೀರ್ಮಾನವಲ್ಲ

nikhil
Published on

 ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್​ ರಾಮಚಂದ್ರಗೌಡ ಹೇಳಿಕೆ > ಬಿವೈವಿ ನಾಯಕತ್ವದಲ್ಲಿ ಪಕ್ಷ ಸಂಟನೆ ಗುರಿ  

ಶಿಡ್ಲಘಟ್ಟ: ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ, ಶಿಡ್ಲಟ್ಟಕ್ಕೆ ರವಿಯಣ್ಣ ಎಂಬ ನಿಖಿಲ್​ ಕುಮಾರಸ್ವಾಮಿ ಹೇಳಿಕೆ ಜೆಡಿಎಸ್​ ಪಕ್ಷದ ಅಭಿಪ್ರಾಯವೇ ಹೊರತು ಬಿಜೆಪಿ, ಜೆಡಿಎಸ್​ ಮೈತ್ರಿ ನಾಯಕರ ತೀರ್ಮಾನವಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್​ ರಾಮಚಂದ್ರಗೌಡ ತಿಳಿಸಿದರು.

ನಗರದ ಬಿಜೆಪಿ ಸೇವಾಸೌಧ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ನಮ್ಮ ಪಕ್ಷ ಸಂಟಿಸುವಂತೆಯೇ ಜೆಡಿಎಸ್​ನವರು ಅವರ ಪಕ್ಷವನ್ನು ಸಂಟಿಸುತ್ತಾರೆ. ಯಾರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಲಿ, ತಕರಾರು ಇಲ್ಲ. ವಿಧಾನಸಭೆ ಚುನಾವಣೆ ಸಮೀಪಿಸಿದಾಗ ಮೈತ್ರಿಯ ಸಿಎಂ ಅಭ್ಯರ್ಥಿಯನ್ನು ಬಿಜೆಪಿ, ಜೆಡಿಎಸ್​ನ ಹಿರಿಯ ನಾಯಕರು ನಿರ್ಧರಿಸುತ್ತಾರೆ. ಇದೀಗ ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದು, ಅವರ ನಾಯಕತ್ವದಲ್ಲಿ ಪಕ್ಷ ಸಂಟಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಶಿಡ್ಲಟ್ಟ ತಾಲೂಕಿನ ಹೋಬಳಿವಾರು ಪ್ರವಾಸ ಮಾಡಿ, ಆ. 3ರಂದು ಸಂಟನಾ ಕಾರ್ಯಕ್ರಮ ನಡೆಸಲಿದ್ದೇವೆ ಎಂದರು.

ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ತಾಲೂಕು ಅಧ್ಯಕ್ಷ ಸೀಕಲ್​ ಆನಂದಗೌಡ, ಮುಖಂಡರಾದ ಸುರೇಂದ್ರಗೌಡ, ಕನಕಪ್ರಸಾದ್​, ನಗರಸಭೆ ಸದಸ್ಯ ನಾರಾಯಣಸ್ವಾಮಿ ಹಾಜರಿದ್ದರು.

ಕೈಗಾರಿಕೆಯ ವಿರೋಧಿಗಳಲ್ಲ: ಪಕ್ಷ ಕೈಗಾರಿಕೆಗಳ ವಿರೋಧಿಗಳಲ್ಲ. ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗಳಿಗಾಗಿ ಸ್ವಾಧಿನಪಡಿಸಿಕೊಳ್ಳುವುದನ್ನು ವಿರೋಧಿಸುತ್ತೇವೆ. ಜಂಗಮಕೋಟೆ ಭಾಗದಲ್ಲಿನ ಬಹುತೇಕ ಜಮೀನು ಎ ಮತ್ತು ಬಿ ವರ್ಗದ ಫಲವತ್ತಾದ ಭೂಮಿಯಾಗಿದ್ದು, ಕೈಗಾರಿಕೆಗಳಿಗೆ ಸ್ವಾಧಿನಪಡಿಸಿಕೊಳ್ಳುವಂತಿಲ್ಲ ಎಂದು ಸರ್ಕಾರದ ನಿಯಮಗಳೇ ಸಾರಿ ಸಾರಿ ಹೇಳುತ್ತವೆ. ರೈತರ ಹಿತದೃಷ್ಟಿಯಿಂದ ಕೆಐಎಡಿಬಿಯಿಂದ ಜಮೀನು ಸ್ವಾಧಿನ ವಿಚಾರವಾಗಿ ಶಾಸಕರು ಸ್ಪಷ್ಟ ತೀರ್ಮಾನಕ್ಕೆ ಬರಬೇಕಾಗುತ್ತದೆ. ರ್ನಿಲಿಪ್ತತೆ ಬಿಟ್ಟು ರೈತ ಪರ ನಿಲ್ಲಬೇಕಿದೆ ಎಂದು ಸೀಕಲ್​ ರಾಮಚಂದ್ರಗೌಡ ಆಶಿಸಿದರು.

ಇಡಿ ದಾಳಿ ರಾಜಕೀಯ ಪ್ರೇರಿತವಲ್ಲ

ಬಾಗೇಪಲ್ಲಿ ಶಾಸಕ ಎಸ್​.ಎನ್​. ಸುಬ್ಬಾರೆಡ್ಡಿ ಅವರ ಮನೆ, ಕಚೇರಿಗಳ ಮೇಲಿನ ಇಡಿ ದಾಳಿಯ ಬಗ್ಗೆ ಪ್ರತಿಕ್ರಿಯಿಸಿ, ಇಡಿ ದಾಳಿಯು ಸಹಜ ಕಾನೂನು ಪ್ರಕ್ರಿಯೆ. ಇದು ರಾಜಕೀಯ ಪ್ರೇರಿತವಲ್ಲ. ಸುಬ್ಬಾರೆಡ್ಡಿ ವಿರುದ್ಧ ಪರಾಜಿತ ಅಭ್ಯರ್ಥಿ ಮುನಿರಾಜು ಅವರು ಚುನಾವಣೆ ಸಮಯದಲ್ಲಿ ಸಲ್ಲಿಸಿದ ಆಸ್ತಿಯ ಅಫಿಡವಿಟ್​ಮೇಲೆ ಸುಳ್ಳು ಮಾಹಿತಿ ನೀಡಿದ್ದೀರಿ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಎರಡು ವರ್ಷ ಆಗಿದೆ. ಅದಕ್ಕೂ ಇದೀಗ ಇಡಿ ದಾಳಿಗೂ ಸಂಬಂಧವಿಲ್ಲ. ನೀವು ಸಚಿವ ಸ್ಥಾನದ ಆಕಾಂಗಳಾಗಿದ್ದು, ನಿಮ್ಮ ಪಕ್ಷದಲ್ಲೇ ಇರುವ ಇತರ ಸಚಿವ ಸ್ಥಾನದ ಆಕಾಂಗಳೇ ನಿಮಗೆ ಸಚಿವ ಸ್ಥಾನ ತಪ್ಪಿಸುವ ಉದ್ದೇಶದಿಂದ ಇಡಿಗೆ ಮಾಹಿತಿ ಕೊಟ್ಟಿರಬಹುದಲ್ಲವೇ? ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್​ ರಾಮಚಂದ್ರಗೌಡ ಪ್ರಶ್ನಿಸಿದರು.

ಇನ್ನು ಮಾಜಿ ಶಾಸಕ ಎಂ.ರಾಜಣ್ಣ ಅವರಿಗೂ ನನಗೂ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಮುನಿಸೂ ಇಲ್ಲ. ಸಹಜವಾಗಿ ಅಭಿಪ್ರಾಯ ಭೇದಗಳಿರುತ್ತವೆ. ಕೆಲವೊಂದು ಪದಾಧಿಕಾರಿಗಳ ನೇಮಕ ಇನ್ನಿತರ ವಿಷಯಗಳ ವಿಚಾರವಾಗಿ ಅವರ ಬೆಂಬಲಿಗರು, ನಮ್ಮ ಬೆಂಬಲಿಗರು ಮುನಿಸಿಕೊಳ್ಳುವುದುಂಟು. ನಮ್ಮಿಬ್ಬರಿಗೂ ಪಕ್ಷ ಸಂಟನೆ ಮುಖ್ಯ. ಈ ನಿಟ್ಟಿನಲ್ಲಿ ಇಬ್ಬರೂ ಜತೆಯಾಗಿ ನಡೆಯಲಿದ್ದೇವೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net