

ಶಿರಾ: ಕೇತಗಾನಹಳ್ಳಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ನ್ಯಾಯಾಲಯದಲ್ಲಿ ರಿಲ್ೀ ಸಿಕ್ಕಿದ್ದು ನ್ಯಾಯಾಲಯದ ಆದೇಶಕ್ಕೆ ನಾವೆಲ್ಲಾ ತಲೆಬಾಗಲೇಬೇಕು ಎಂದು ಜೆಡಿಎಸ್ ಯುವ ಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಜಮೀನು ವಿವಾದ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಅದರ ಬಗ್ಗೆ ಹೆಚ್ಚೇನು ಚರ್ಚೆ ಮಾಡುವುದಿಲ್ಲ. ಕೋರ್ಟ್ ನಿರ್ದೇಶನಕ್ಕೆ ಎಲ್ಲರು ತಲೆಬಾಗಬೇಕು ಎಂದು ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಎಸ್ಐಟಿ ಅನ್ನುವುದನ್ನು ಸರ್ಕಾರ ಯಾವ ರೀತಿ ದ್ವೇಷದ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಅನ್ನುವ ಅನೇಕ ನಿರ್ದೇಶನ ನಮ್ಮ ಮುಂದೆ ಇದೆ. ಎಸ್ಐಟಿ ಹಾಗೂ ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾಗಿ ಕೆಲಸ ಮಾಡಲು ಸರ್ಕಾರ ಅವಕಾಶ ಕೊಡಬೇಕು. ಪಾರದರ್ಶಕತೆಯಿಂದ ಕೆಲಸ ಮಾಡಲು ಬಿಡಬೇಕು. ಕಳೆದ ಎರಡೂವರೆ ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೆಲ ರಾಜಕೀಯವ್ಯಕ್ತಿಗಳನ್ನ ಬಲಿಪಶು ಮಾಡಲು ಎಸ್ಐಟಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲಿ ಕೇತಗಾನಹಳ್ಳಿ ಕೂಡ ಒಂದು. ಇಂತಹ ದ್ವೇಷದ ರಾಜಕಾರಣ ಮೂರು ಪಕ್ಷಕ್ಕೂ ಒಳ್ಳೆಯದಲ್ಲ. ಇದರಿಂದ ಸಾಧನೆ ಮಾಡುವಂತಹದ್ದು ಏನು ಇಲ್ಲ ಎಂದರು.
ಅವಕಾಶ ಸಿಕ್ಕಾಗ ಜನಗಳ ಪರವಾಗಿ ಒಳ್ಳೆಯಕೆಲಸ ಮಾಡಿ. ನೀವು ಈ ರೀತಿ ದ್ವೇಷ ಮಾಡಿಕೊಂಡು ಹೋದರೇ, ನೀವು ಹಾಕಿ ಕೊಟ್ಟ ಹಾದಿಯಲ್ಲೇ ಮುಂಬರುವ ಹೊಸ ಸರ್ಕಾರ ಅನುಸರಣೆ ಮಾಡಬೇಕಾಗುತ್ತದೆ. ಇವತ್ತಿನ ನ್ಯಾಯಾಲಯದ ತೀರ್ಪಿನಿಂದ ಸರ್ಕಾರ ಎಚ್ಚೆತ್ತುಕೊಂಡರೇ ಸಾಕು ಎಂದು ತಿವಿದರು.