ನಿಖಿಲ್​ ವಿವಾಹಕ್ಕೆ ಜಾನಪದ ಲೋಕದ ಬಳಿ 54 ಎಕರೆ ಜಮೀನು ಪರಿಶೀಲಿಸಿದ ಮಾಜಿ ಸಿಎಂ ಎಚ್​ಡಿಕೆ

nikil
Published on

ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್‌ ವಿವಾಹಕ್ಕಾಗಿ ಚನ್ನಪಟ್ಟಣ–ರಾಮನಗರ ನಡುವೆ ಜಾಗದ ಹುಡಕಾಟ ಆರಂಭವಾಗಿದೆ.

ಜಾನಪದ ಲೋಕದ ಬಳಿ 54 ಎಕರೆ ಜಮೀನನ್ನು ಎಚ್‌ಡಿಕೆ ಪರಿಶೀಲಿಸಿದ್ದು, ಅದರ ಮಾಲೀಕರೊಂದಿಗೆ ಮಾತುಕತೆ ಕೂಡ ನಡೆಸಿದ್ದಾರೆ.

ಈ ಜಾಗ ರಾಮನಗರದಿಂದ 5 ಕಿ.ಮೀ. ಹಾಗೂ ಚನ್ನಪಟ್ಟಣದಿಂದ 8 ಕಿ.ಮೀ. ದೂರದಲ್ಲಿ ಇದೆ. ಬೆಂಗಳೂರು–ಮೈಸೂರುಹೆದ್ದಾರಿಗೆ ಹೊಂದಿಕೊಂಡಂತೆ ಇದೆ. ಇಲ್ಲಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್‌ಗೆ ಸೇರಿದ 22 ಎಕರೆ, ಉದ್ಯಮಿಗೆ ಸೇರಿದ 23 ಎಕರೆಯೂ ಸೇರಿದಂತೆ ಒಟ್ಟು 54 ಎಕರೆ ಪ್ರದೇಶವನ್ನು ಎಚ್​ಡಿಕೆ ಗುರುತಿಸಿದ್ದಾರೆ.

ಈ ಸ್ಥಳ ಅಂತಿಮಗೊಂಡರೇ ಅದ್ಧೂರಿ ಸೆಟ್‌ ಹಾಕಿ ನಿಖಿಲ್‌ ಹಾಗೂ ರೇವತಿ ವಿವಾಹ ನಡೆಸಲು ಎಚ್‌ಡಿಕೆ ನಿರ್ಧರಿಸಿದ್ದಾರೆ. ಮಂಟಪ, ಭೋಜನಾಲಯ, ವಿಐಪಿ ಲಾಂಜ್‌, ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮೊದಲಾದ ತಾತ್ಕಾಲಿಕ ಸೌಕರ್ಯಗಳು ನಿರ್ಮಾಣ ಆಗಲಿವೆ.

ಫೆ.10ರಂದು ನಿಖಿಲ್‌ ನಿಶ್ಚಿತಾರ್ಥ ನೆರವೇರಲಿದ್ದು, ಬಳಿಕ ಎಚ್‌ಡಿಕೆ ದಂಪತಿ ಸ್ಥಳವನ್ನು ಅಂತಿಮಗೊಳಿಸಲಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net